ಹನೂರು: ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ
Update: 2019-02-10 22:13 IST
ಹನೂರು,ಫೆ.10: ತಾಲೂಕಿನ ಮಲೈಮಹದೇಶ್ವರ ಬೆಟ್ಟದ ಕಾಡಂಚಿನ ಭಾಗದಲ್ಲಿರುವ ಅಲಂಬಾಡಿ ಶಾಲೆಯಲ್ಲಿ ಓಸಾಟ್ ಸಂಸ್ಥೆಯ ಮುಖಾಂತರ ಶಾಲಾ ಕಟ್ಟಡ ಮತ್ತು ಶೌಚಾಲಯ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಬಳಿಕ ಒಶಾಟ್ ಸಂಸ್ಥೆಯ ಸದಸ್ಯರಾದ ನಾಗೇಶ್ ಮಾತನಾಡಿ, ಓಸಾಟ್ ಸಂಸ್ಥೆಯ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯ ಶ್ರೀವತ್ಸ, ಎಸ್‍ಡಿಎಂಸಿ ಅಧ್ಯಕ್ಷ ಮಾದಪ್ಪ, ಸಿಆರ್‍ಪಿ ಮಹೇಂದ್ರ, ಶಿಕ್ಷಕರಾದ ಜಯರಾಮ್, ಸಂತೋಷ್, ನಾಗರಾಜ್, ಮಂಜುನಾಥ್,ಸುಮತಿ, ಕಾರ್ತಿಕ್, ಸೆಂದಿ ಸೇರಿದಂತೆ ಅನೇಕರು ಹಾಜರಿದ್ದರು.