ಕಳ್ಳರಿದ್ದಾರೆಂದು ನಂಬಿಸಿ ವೃದ್ದೆಯ ಚಿನ್ನಾಭರಣ ದರೋಡೆ

Update: 2019-02-10 17:26 GMT

ಶಿವಮೊಗ್ಗ, ಫೆ. 10: ಕಳ್ಳರಿದ್ದಾರೆ ಎಂದು ನಂಬಿಸಿ ವೃದ್ದೆಯ ಚಿನ್ನಾಭರಣಗಳನ್ನು ತಂಡವೊಂದು ಅಪಹರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಗಣಪತಿ ಕೆರೆ ಬಳಿ ನಡೆದಿದೆ.

ಶಾಂತಮ್ಮ ಚಿನ್ನಾಭರಣ ಕಳೆದುಕೊಂಡ ವೃದ್ದೆ ಎಂದು ಗುರುತಿಸಲಾಗಿದೆ. ಕಳವಾದ ಸರ, ಕಿವಿಯೊಲೆಯ ಮೌಲ್ಯ ಅಂದಾಜು 20 ಸಾವಿರ ರೂ.ಗಳಾಗಿದೆ. ಈ ಸಂಬಂಧ ಸಾಗರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆ ಹಿನ್ನೆಲೆ: ಗಣಪತಿ ಕೆರೆ ಬಳಿ ಹೋಗುತ್ತಿದ್ದ ಶಾಂತಮ್ಮರನ್ನು ಮಹಿಳೆ ಹಾಗೂ ಯುವಕರಿದ್ದ ವಂಚಕರು ತಡೆದು ನಿಲ್ಲಿಸಿದ್ದಾರೆ. ಈ ಪ್ರದೇಶದಲ್ಲಿ ಸರಗಳ್ಳರ ಹಾವಳಿ ಹೆಚ್ಚಿದೆ ಎಂದು ಭಯ ಹುಟ್ಟಿಸಿದ್ದಾರೆ. ನಂತರ ಅವರ ಬಳಿಯಿರುವ ಸರ, ಕಿವಿಯೊಲೆ ಪಡೆದು ಬಟ್ಟೆಯೊಂದರಲ್ಲಿ ಕಟ್ಟಿಕೊಡುವ ನಾಟಕವಾಡಿದ್ದಾರೆ. ಮನೆಗೆ ಹೋಗಿ ಸರ ಹಾಕಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಮನೆಗೆ ಹೋಗಿ ಪರಿಶೀಲಿಸಿದಾಗ ಬಟ್ಟೆಯಲ್ಲಿ ಚಿನ್ನಾಭರಣವಿಲ್ಲದಿರುವುದು ಕಂಡುಬಂದಿದೆ. ವಂಚನೆಗೊಳಗಾಗಿರುವುದರ ಅರಿವಾಗುತ್ತಿದ್ದಂತೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News