ಅಮೆರಿಕ ಪಡೆಗಳಿಗೆ ಅಧಿಕ ದೇಣಿಗೆ ಪಾವತಿಸುವ ಒಪ್ಪಂದಕ್ಕೆ ದ.ಕೊರಿಯ ಸಹಿ

Update: 2019-02-10 18:35 GMT

ಸೋಲ್,ಫೆ.10: ಕೊರಿಯ ಪರ್ಯಾಯದ್ವೀಪದಲ್ಲಿ ಅಮೆರಿಕದ ಪಡೆಗಳ ಉಪಸ್ಥಿತಿಯ ನಿರ್ವಹಣೆಗೆ ದಕ್ಷಿಣ ಕೊರಿಯದ ದೇಣಿಗೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದ ಅಲ್ಪಾವಧಿಯ ಒಪ್ಪಂದವೊಂದಕ್ಕೆ ಅಮೆರಿಕದ ಹಾಗೂ ದ.ಕೊರಿಯದ ಉನ್ನತ ರಾಜತಾಂತ್ರಿಕರು ಶನಿವಾರ ಸಹಿಹಾಕಿದ್ದಾರೆ.

ಆದರೆ ನೂತನ ಒಪ್ಪಂದಕ್ಕೆ ದಕ್ಷಿಣ ಕೊರಿಯದ ಸಂಸತ್‌ನ ಅನುಮೋದನೆ ಇನ್ನಷ್ಟೇ ದೊರೆಯಬೇಕಾಗಿದೆ. ಇದರಿಂದಾಗಿ ದಕ್ಷಿಣ ಕೊರಿಯಾ ಅಮೆರಿಕಕ್ಕೆ ಈ ವರ್ಷ 1.03 ಟ್ರಿಲಿಯನ್ ಡಾಲರ್ ದೇಣಿಗೆ ನೀಡಬೇಕಾಗಿದೆ. ದಕ್ಷಿಣ ಕೊರಿಯಾವು 2018ರಲ್ಲಿ ಅಮೆರಿಕ ಪಡೆಗಳಿಗೆ 960 ದಶಲಕ್ಷ ಡಾಲರ್ ದೇಣಿಗೆ ನೀಡಿತ್ತು. ಆದರೆ ಹಿಂದಿನ ಒಪ್ಪಂದಗಳು ಐದು ವರ್ಷಗಳ ಅವಧಿಯದ್ದಾಗಿದ್ದಾರೆ, ನೂತನ ಒಪ್ಪಂದವು ಕೇವಲ ಒಂದೇ ವರ್ಷದಲ್ಲಿ ಮುಕ್ತಾಯಗೊಳ್ಳುತ್ತದೆ. ಅಮೆರಿಕದ ಸೇನಾ ದೇಣಿಗೆಗೆ ನೀಡುವ ನೂತನ ಒಪ್ಪಂದದ ಬಗ್ಗೆ ಸ್ವದೇಶದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿರುವುದನ್ನು ದಕ್ಷಿಣ ಕೊರಿಯದ ವಿದೇಶಾಂಗ ಸಚಿವ ಕುವಾಂಗ್ ವಾ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ನೂತನ ಒಪ್ಪಂದಕ್ಕೆ ಸಂಸತ್‌ನ ಅನುಮೋದನೆ ದೊರೆಯು ಸಾಧ್ಯತೆ ಬಗ್ಗೆ ಈಗಾಗಲೇ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆಯೆದಂು ಅವರು ತಿಳಿಸಿದ್ದಾರೆ.

  ದಕ್ಷಿಣ ಕೊರಿಯದಲ್ಲಿ ಸುಮಾರು 28,500 ಅಮೆರಿಕ ಸೈನಿಕರು ನಿಯೋಜಿತರಾಗಿದ್ದಾರೆ. 1950-53ರ ಕೊರಿಯ ಯುದ್ಧದ ಬಳಿಕ ಅಮೆರಿಕವು ಆ ದೇಶದಲ್ಲಿ ತನ್ನ ಸೇನಾ ಉಪಸ್ಥಿತಿಯನ್ನು ಕಾಯ್ದುಕೊಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News