ಮಾಸಾಶನ ನಿರಾಕರಣೆ ಆರೋಪ: ವಿಕಲಚೇತನ ಆತ್ಮಹತ್ಯೆ

Update: 2019-02-12 11:36 GMT

ತುಮಕೂರು,ಫೆ.12: ಮಾಸಾಶನ ಸೌಲಭ್ಯ ನೀಡಲು ತಹಶೀಲ್ದಾರ್ ನಿರಾಕರಿಸಿದ್ದಾರೆ ಎಂದು ಆರೋಪಿಸಿ, ವಿಶೇಷ ಚೇತನನೋರ್ವ ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಲಿಂಗಯ್ಯನಪಾಳ್ಯ ಗ್ರಾಮದಲ್ಲಿ ನಡೆದಿದೆ.

ಧರಣೇಂದ್ರ (22) ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ವಿಶೇಷ ಚೇತನ. ತಾಲೂಕಿನ ಬೆಳಧರ ಗ್ರಾಮದಲ್ಲಿ ತನಗಾದ ನೋವಿನ ಕುರಿತು ಸಾರ್ವಜನಿಕರ ಬಳಿ ಅಳಲು ತೋಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಮಾಸಾಶನ ಬಿಡುಗಡೆ ಮಾಡಿಕೊಡುವಂತೆ ಹಲವು ದಿನಗಳಿಂದ ಪೂರಕ ದಾಖಲೆಗಳೊಂದಿಗೆ ತಹಶೀಲ್ದಾರ್ ಪರಮೇಶ್ ಬಳಿ ಅವಲತ್ತುಕೊಂಡಿದ್ದು, ಆದರೆ ವಾರ್ಷಿಕ ಆದಾಯ 15 ಸಾವಿರ ಇದೆ ಎಂದು ತಹಶಿಲ್ದಾರ್ ನಿರಾಕರಿಸಿದ್ದರು ಎನ್ನಲಾಗಿದೆ. ಕೋರಾ ಗ್ರಾಮ ಪಂಚಾಯತ್‍ನಲ್ಲಿ 15 ಸಾವಿರ ರೂ. ಆದಾಯ ಪ್ರಮಾಣಪತ್ರ ತಂದಿದ್ದರೂ, ಮಾಸಾಶನ ನವೀಕರಣ ಮಾಡುವುದಿಲ್ಲ ಎಂದು ತಹಶಿಲ್ದಾರ್ ತಿಳಿಸಿದ್ದರು ಎಂಬ ಆರೋಪ ಕೇಳಿಬಂದಿದೆ. 

ಅರ್ಜಿ ವಜಾಗೊಂಡಿಲ್ಲ: ವಿಶೇಷ ಚೇತನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ರಾಕೇಶ್‍ ಕುಮಾರ್ ಮಾತನಾಡಿ, ಮಾಸಾಶನ ಅರ್ಜಿ ವಜಾಗೊಂಡಿಲ್ಲ, ಮಾಸಾಶನ ಪಡೆಯಲು ಆದಾಯ ಪ್ರಮಾಣಪತ್ರ ಅಥವಾ ಪಡಿತರ ಚೀಟಿ ಇದ್ದರೆ ಸಾಕು, ಮಾಹಿತಿ ಕೊರತೆಯಿಂದಾಗಿ ಇಂತಹ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಧಿಕಾರಿಗಳು ತಪ್ಪು ಮಾಡಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News