ಶಾಸಕ ಪ್ರೀತಮ್ ಗೌಡ ಮನೆಗೆ ದಾಳಿ ಪ್ರಕರಣ: 8 ಜೆಡಿಎಸ್ ಕಾರ್ಯಕರ್ತರ ಮೇಲೆ ಎಫ್ಐಆರ್
Update: 2019-02-13 21:55 IST
ಹಾಸನ,ಫೆ.13: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಶಾಸಕ ಪ್ರೀತಮ್ ಜೆ.ಗೌಡ ಮನೆಗೆ ಕಲ್ಲು ತೂರಿದ ಪರಿಣಾಮ ಓರ್ವನ ಕಣ್ಣಿನ ಭಾಗಕ್ಕೆ ಗಾಯಗಳಾದ ಘಟನೆಗೆ ಸಂಬಂಧಿಸಿದಂತೆ 8 ಮಂದಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಾಜಿ ನಗರಸಭಾ ಅಧ್ಯಕ್ಷ ಅನೀಲ್ ಕುಮಾರ್, ಚಂದ್ರು ಕಾಟೀಹಳ್ಳಿ, 16ನೇ ವಾರ್ಡ್ ನಗರಸಭಾ ಸದಸ್ಯ ಪ್ರಶಾಂತ್, ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಪುತ್ರ ಜಿಪಂ ಸದಸ್ಯ ಸ್ವರೂಪ್, ಕಮಲ್ ಕುಮಾರ್, ನಗರಸಭಾ ಸದಸ್ಯ ಗಿರೀಶ್, ಜಗದೀಶ್, ಮಾಜಿ ನಗರಸಭಾ ಸದಸ್ಯ ಬಾನು ಪ್ರಕಾಶ್ ಮೇಲೆ ಗಾಯಾಳು ಬಿಜೆಪಿ ಕಾರ್ಯಕರ್ತ ರಾಹುಲ್ ಕಿಣಿ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿದ್ದಾರೆ.