ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಿಲ್ಲಾಧಿಕಾರಿ- ಜಿಪಂ ಸಿಇಓ

Update: 2019-02-14 13:34 GMT

ದಾವಣಗೆರೆ,ಫೆ.14: ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಪ್ರೇಮಿಗಳ ದಿನದಂದೇ (ಫೆ.14) ಕೇರಳದ ಕ್ಯಾಲಿಕಟ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಂದ್ರ ಮೂಲದ ಬಗಾದಿ ಗೌತಮ್ ಜಿಲ್ಲಾಧಿಕಾರಿಯಾಗಿ ಹಾಗೂ ಕೇರಳ ಮೂಲದ ಎಸ್.ಅಶ್ವತಿ ಅವರು ಜಿಪಂ ಸಿಇಓ ಆಗಿ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಎರಡು ಜೋಡಿಹಕ್ಕಿಗಳು ಇಂದು ಬೆಳಗ್ಗೆ ಕೇರಳದ ಕ್ಯಾಲಿಕಟ್‍ನಲ್ಲಿ 10.30ರ ಶುಭಮುಹೂರ್ತದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗೆ ಕೇರಳಕ್ಕೆ ತೆರಳಿರುವ ದಾವಣಗೆರೆಯ ಅಧಿಕಾರಿಗಳ ವರ್ಗ ಶುಭ ಹಾರೈಸಿದ್ದಾರೆ.

ಸಿಇಓ ಅಶ್ವತಿ ಕಳೆದ 2 ವರ್ಷಗಳಿಂದ ದಾವಣಗೆರೆ ಜಿಪಂನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ಹಾಗೂ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ತಂದು ದಕ್ಷ, ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರಾಗಿದ್ದಾರೆ. ಐಎಸ್‍ಎಸ್ ಮಾಡಿರುವ ಇವರು ಈ ಹಿಂದೆ ಉಡುಪಿಯಲ್ಲಿ ಕೆಲಸ ಮಾಡಿದ್ದರು. ನಂತರ ದಾವಣಗೆರೆ ಜಿಪಂ ಸಿಇಓ ಆಗಿ ನೇಮಕಗೊಂಡಿದ್ದರು.

ದಾವಣಗೆರೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಈ ಹಿಂದೆ ರಾಯಚೂರಲ್ಲಿ ಡಿಸಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ 4 ತಿಂಗಳ ಹಿಂದೆ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದರು. ಈ ಐಎಎಸ್ ಅಧಿಕಾರಿಗಳು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಇವರ ಮದುವೆ ಪ್ರೇಮಿಗಳ ದಿನದಂದೇ ನಡೆದಿದ್ದು, ಫೆ.17 ರಂದು ವಿಶಾಖಪಟ್ಟಣಂನಲ್ಲಿ ಆರತಕ್ಷತೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News