ಶಾಸಕ ಪ್ರೀತಮ್ ಮನೆ ಮೇಲೆ ದಾಳಿ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ, ಮಾನವ ಸರಪಳಿ

Update: 2019-02-14 14:08 GMT

ಹಾಸನ, ಫೆ. 14: ಕಳೆದ ಒಂದು ದಿನಗಳ ಹಿಂದೆ ಜೆಡಿಎಸ್ ಕಾರ್ಯಕರ್ತರು ಶಾಸಕ ಪ್ರೀತಮ್ ಗೌಡರ ಮನೆ ಮೇಲೆ ದಾಳಿ ನಡೆಸಿ, ಹಿಂಸಾಚಾರಕ್ಕೆ ಮುಂದಾಗಿರುವುದನ್ನು ಖಂಡಿಸಿ ಗುರುವಾರ ಬೆಳಿಗ್ಗೆ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ ಹಾಗೂ ಮಾನವ ಸರಪಳಿ ನಡೆಸಿ ಆಕ್ರೋಶವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಏಳು ತಿಂಗಳಲ್ಲಿ ಗುಂಡಾಗಿರಿ ಮಾಡುತ್ತಿದ್ದಾರೆ, ಘಟನೆ ನಡೆಯುವ ಮುನ್ನ ಶಾಸಕರ ಮನೆಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ವಿಷಯ ಪೊಲೀಸ್ ಇಲಾಖೆಗೆ ತಿಳಿಯದೆ ಹೋಗಿದೆ. ಈ ಘಟನೆ ಬಗ್ಗೆ ಹಲ್ಲೆಗೊಳಗಾದ ಕಾರ್ಯಕರ್ತರ ನೀಡಿದ ದೂರಿನ ಅನ್ವಯ ಪೊಲೀಸರು ಸಾಮಾನ್ಯವದ 324 ಸೆಕ್ಷನ್ ದೂರನ್ನು ದಾಖಲಿಸಿದ್ದಾರೆ ಎಂದು ದೂರಿದರು. ಘಟನೆಯನ್ನು ಗಮನಿಸಿದರೆ ಸೆಕ್ಷನ್ 307 ಸೆಕ್ಷನ್ ದೂರನ್ನು ಹಾಕಬೇಕಾಗಿತ್ತು ಆದರೆ ಪೊಲೀಸರು ಉಸ್ತುವಾರಿ ಸಚಿವರ ನಿರ್ದೇಶನದಂತೆ ನಡೆದುಕೊಳ್ಳುತ್ತಿರುವುದನ್ನು ಖಂಡಿಸಿದರು.

ಪ್ರೀತಮ್‍ರವರು ಯಾವುದೇ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬರದೇ ತನ್ನ ಸ್ವಂತ ಸಾಮಥ್ರ್ಯದಿಂದ ಸಮಾಜ ಸೇವೆಯ ಮೂಲಕ ಮೇಲೆ ಬಂದು ಇಂದು ಜೆಡಿಎಸ್ ಭದ್ರಕೋಟೆಯನ್ನು ಭೇದಿಸಿ ಆಯ್ಕೆಯಾಗಿರುವುದು ಜೆಡಿಎಸ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಈ ತರಹದ ಹಲ್ಲೆ ನಡೆದಿರುವುದು ಇದೇನು ಮೊದಲಲ್ಲ ಚುನಾವಣೆ ಸಮಯದಲ್ಲಿ ಹಲವಾರು ಬಾರಿ ಜೆಡಿಎಸ್ ಕಾರ್ಯಕರ್ತರು ಉಸ್ತುವರಿ ಸಚಿವರಾದ ರೇವಣ್ಣ ಅವರ ಅಣತಿ ಮೇರೆಗೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಒಕ್ಕಲಿಗರಿಂದ ಹಾಗೂ ರೈತರಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಮೊಸಳೆ ಕಣ್ಣರಿನ ದೇವೇಗೌಡರ ಕುಟುಂಬ ಇಂದು ಅದೇ ಮುಂಚೂಣಿಯಲ್ಲಿರುವ ಒಕ್ಕಲಿಗರನ್ನು ಮುಗಿಸಲು ಯತ್ನಿಸುವುದು ನಮ್ಮೆಲ್ಲರ ವಿಪರ್ಯಸವಾಗಿದೆ. ಒಕ್ಕಲಿಗರನ್ನು ತಮ್ಮ  ಪಕ್ಷದ ಏಳಿಗೆಗಾಗಿ ಬೆಳೆಸಿಕೊಳ್ಳುವುದಷ್ಟೇ, ಅದರ ಕೆಲಸ ಒಕ್ಕಲಿಗರು ಯಾವುದೇ ಕಾರಣಕ್ಕೂ ತಮ್ಮ ಕುಟುಂಬದವರಿಗಾಗಿ ಇಲ್ಲವೇ ಅವರ ಕುಟುಂಬದವರಿಗೆ ಸರಿಸಮನಾಗಿ ಬೆಳೆದಲ್ಲಿ ಅಂಥವರನ್ನು ಮುಗಿಸುವುದೇ ಅವರ ಕೆಲಸ ಎಂದು ಆರೋಪಿಸಿದರು.

ರಾಜ್ಯಾದ್ಯಂತ ನೂರಾರು ಹೋರಾಟರರ ಮುಂಚೂಣಿ ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದ್ದು, ಚೆಲುವರಾಯಸ್ವಾಮಿ, ಬಾಲಕೃಷ್ಣ, ಬಚ್ಚೇಗೌಡ ಇನ್ನು ಹಲವಾರು ನಾಯಕರಿದ್ದಾರೆ. ಪ್ರೀತಮ್ ಜೆ. ಗೌಡರ ಮನೆ ಬಳಿ ಬಂದು ಗುಂಡಗಿರಿ ಮಾಡುವಾಗ ಕೇವಲ ಒಬ್ಬ ಇಬ್ಬರು ಪೊಲೀಸರು ಮಾತ್ರ ಇವರಿಗೆ ರಕ್ಷಣೆ ಕೊಡಲು ಇದ್ದರು. ಕೊನೆಗೆ ಜೆಡಿಎಸ್ ಕಾರ್ಯಕರ್ತರು 600 ಜನರಾದರು. ಕಲ್ಲು ತೂರಾಟ ನಡೆಯಿತು ಎಂದರು. ಬಿಜೆಪಿ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇವರು ಎಷ್ಟು ರಾಜಕೀಯ ಮಾಡುತ್ತಾರೆ ಅದಕ್ಕೆ ಹತ್ತರಷ್ಟು ರಾಜಕೀಯ ಮಾಡುವ ಶಕ್ತಿ ನಮ್ಮಲ್ಲಿ ಇದೆ. ಪ್ರೀತಮ್ ಪರವಾಗಿ ಕಾರ್ಯಕರ್ತರು ನಿಂತಿಕೊಳ್ಳಿ ಎಂದು ಪಕ್ಷದ ಮುಖಂಡರು ಕಾರ್ಯಕರ್ತರಿಗೆ ದೈರ್ಯ ತುಂಬಿದರು. ಹಾಸನದಲ್ಲಿ ಪ್ರೀತಮ್ ಗೆದ್ದು ಬಂದು ಬೆಳೆಯುತ್ತಿದ್ದಾರೆ ಎಂದು ಈಗಲೆ ಅವರನ್ನು ತುಣಿದು ಹಾಕಲು ಕುಂಟು ನೆಪ ಮಾಡಿಕೊಂಡು ಈ ಕಲ್ಲು ತೂರಾಟ ನಡೆದಿದೆ. ಗುಂಡಗಿರಿ ಮಾಡಿದವರಿಗೆ ನಾವುಗಳು ರಾಜಕೀಯವಾಗಿ ಉತ್ತರ ಕೊಡುವುದಾಗಿ ಎಚ್ಚರಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ನೂರಾರು ಜನ ಬಿಜೆಪಿ ಕಾರ್ಯಕರ್ತರು ಎನ್.ಆರ್. ವೃತ್ತಕ್ಕೆ ತೆರಳಿ ಮಾನವ ಸರಪಳಿ ನಡೆಸಿ ಜೆಡಿಎಸ್ ಗುಂಡಗಿರಿ ವರ್ತನೆಯನ್ನು ಖಂಡಿಸಿದರು. ನಂತರ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಯೋಗಾರಮೇಶ್, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಮಾಜಿ ಶಾಸಕ ಬಿ.ವಿ. ಕರೀಗೌಡ, ಹೆಚ್.ಎಂ. ಸುರೇಶ್ ಕುಮಾರ್, ಶ್ರೀನಿವಾಸ್‍ಗೌಡ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರೇಣುಕುಮಾರ್, ಶೋಭನ್ ಬಾಬು, ಸುರೇಶ್, ಚನ್ನಕೇಶವ, ಹೆಚ್.ಎನ್. ನಾಗೇಶ್, ಮನೋಹರ್, ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News