ಭಾರತೀಯರೆಲ್ಲರೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಲಿ: ಹೈಕೋರ್ಟ್ ನಿವೃತ್ತ ನ್ಯಾ. ಎಚ್.ಎನ್.ನಾಗಮೋಹನ ದಾಸ್

Update: 2019-02-14 14:32 GMT

ಸಾಗರ, ಫೆ.14: ಆಳುವ ಸರಕಾರಗಳು ಸಹ ಸಂವಿಧಾನದ ತಿಳಿವಳಿಕೆ ನೀಡುವ ಕೆಲಸ ಮಾಡುತ್ತಿಲ್ಲ. ಪ್ರತಿಯೊಬ್ಬ ಭಾರತೀಯನೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಹೇಳಿದ್ದಾರೆ.

 ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ಬುಧವಾರ ಏರ್ಪಡಿಸಿದ್ದ ಱಸಂವಿಧಾನದ ವಿನ್ಯಾಸ ಮತ್ತು ಆಶಯೞಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿರುವ ಭಾರತದಲ್ಲಿ ಬಹಳಷ್ಟು ಸಾಧನೆಗಳಾಗಿವೆ. ನಮ್ಮ ದಿನನಿತ್ಯದ ಹತ್ತಾರು ಚಟುವಟಿಕೆಗಳು ಕಾನೂನಿನ ಚೌಕಟ್ಟಿನೊಳಗೆ ನಡೆಯುತ್ತವೆ. ಆ ಎಲ್ಲಾ ಕಾನೂನುಗಳಿಗೆ ಸಂವಿಧಾನವೇ ತಾಯಿಯಾಗಿದೆ. ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕೆಂದರೆ ಮೊದಲು ನಮ್ಮ ದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಕೇವಲ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಭೂಭಾಗ ಮಾತ್ರ ದೇಶವಲ್ಲ. ಈ ದೇಶದ ಜನರು, ಅವರ ಇತಿಹಾಸ, ಸಾಂಸ್ಕೃತಿಕ, ಸಾಮಾಜಿಕ ಸಂಬಂಧಗಳನ್ನು ಅರ್ಥಮಾಡಿಕೊಂಡರೆ ಸಂವಿಧಾನವೂ ಅರ್ಥವಾಗುತ್ತದೆ ಎಂದರು.

 ನ್ಯಾಯಾಧೀಶರಾದ ಭಾಮಿನಿ, ಜಿ.ರಾಘವೇಂದ್ರ, ಸೈಯದ್ ಅರಾಫತ್ ಇಬ್ರಾಹೀಂ, ಫೆಲಿಕ್ಸ್ ಅಲಾನ್ಸೋ ಅಂತೋನಿ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ರವೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿ.ಶಂಕರ್ ಪ್ರಾರ್ಥಿಸಿದರು. ರಮೇಶ್ ಮರಸ ಸ್ವಾಗತಿಸಿದರು. ಎಂ.ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News