ನಾಗರಾಜ್‌ಗೆ ಅಂತರ್‌ರಾಷ್ಟ್ರೀಯ ಗೌರವ

Update: 2019-02-14 15:40 GMT

ಶಿವಮೊಗ್ಗ, ಫೆ.14: ಪಶ್ಚಿಮ ಬಂಗಾಳದ ಹೆರಾದಲ್ಲಿ ಈಸ್ಟ್ ಮಿಡ್ನಾಪುರ ಪೋಟೋಗ್ರಾಫಿಕ್ ಅಸೋಸಿಯೇಷನ್ ಏರ್ಪಡಿಸಿದ್ದ 7ನೇ ಅಂತರ್‌ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‌ಗೆ ಎರಡು ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.

ಪೋಟೋ ಜರ್ನಲಿಸಂ ವಿಭಾಗದಲ್ಲಿ ಸರಂಡರ್ ಶೀರ್ಷಿಕೆಯ ಚಿತ್ರವು ಚೇರ್ಮನ್ ಚಾಯ್ಸ ಪ್ರಶಸ್ತಿಗೆ ಹಾಗೂ ಪೋಟೋ ಟ್ರಾವೆಲ್ ವಿಭಾಗದಲ್ಲಿ ಸಿಂಚನೞಶೀರ್ಷಿಕೆಯ ಚಿತ್ರವು ಫೆಡರೇಷನ್ ಆಫ್ ಇಂಟರ್ ನ್ಯಾಷನಲ್ ಆರ್ಟ್ ಪೋಟೋಗ್ರಫಿ ರಿಬ್ಬನ್ ಎನ್ನುವ ಗೌರವಕ್ಕೆ ಪಾತ್ರವಾಗಿದೆ.

ಇದರೊಂದಿಗೆ ಪ್ರಕೃತಿ ವಿಭಾಗದ ಸ್ಪರ್ಧೆಯಲ್ಲಿಯೂ ಇವರ ನಾಲ್ಕು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಸ್ಪರ್ಧೆಯಲ್ಲಿ ಇಟಲಿ, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಸಿಂಗಾಪುರ, ತೈವಾನ್, ಬ್ರೆಜಿಲ್, ಬೆಲ್ಜಿಯಂ, ಯುಎಸ್‌ಎ ಸೇರಿದಂತೆ 46 ದೇಶಗಳಿಂದ ಛಾಯಾಗ್ರಾಹಕರು ಸ್ಪರ್ಧಿಸಿದ್ದರು. ಕಳೆದ ಜನವರಿಯಲ್ಲಿ ಸ್ಪರ್ಧೆ ನಡೆದಿತ್ತು.

ಸ್ಪರ್ಧೆಯಲ್ಲಿ ವಿಜೇತ ಮತ್ತು ಆಯ್ಕೆಯಾದ ಛಾಯಾಚಿತ್ರಗಳ ಪ್ರದರ್ಶನ ಇದೇ ತಿಂಗಳು ಫೆ.25ರಿಂದ 28ರವರೆಗೆ ನಡೆಯಲಿದೆ. ಈಗಾಗಲೇ ನಾಗರಾಜ್ ಅವರ ಶ್ರವಣಬೆಳಗೊಳದ ಬಾಹುಬಲಿ ಮಸ್ತಕಾಭಿಷೇಕದ ಎರಡು ಅತ್ಯುತ್ತಮ ಛಾಯಾಚಿತ್ರಗಳು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News