7.35 ಕೋಟಿ ರೂ. ತೆರಿಗೆ ವಂಚನೆ ಆರೋಪ: ಉದ್ಯಮಿಯ ಬಂಧನ

Update: 2019-02-16 14:15 GMT

ಬೆಂಗಳೂರು, ಫೆ.16: ತೆರಿಗೆ ವಂಚಕರು ಮತ್ತು ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಮುಂದುವರಿಸಿರುವ ಆದಾಯ ತೆರಿಗೆ ಇಲಾಖೆ, 7.35 ಕೋಟಿ ರೂ.ಗಳ ತೆರಿಗೆ ವಂಚನೆ ಆರೋಪ ಪ್ರಕರಣ ಸಂಬಂಧ ತುಮಕೂರು ಮೂಲದ ಉದ್ಯಮಿಯೋರ್ವನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಇಲಾಖೆ ವಿರುದ್ಧ ಮೇಲ್ಮನವಿ ಸಲ್ಲಿಸಿ ವಿಫಲರಾಗಿದ್ದರೂ ಕೂಡ ಈ ಉದ್ಯಮಿ 7.35 ಕೋಟಿ ರೂ.ಗಳ ತೆರಿಗೆ ಬಾಕಿ ಮತ್ತು ಬಡ್ಡಿ ಮೊತ್ತವನ್ನು ಪಾವತಿಸದೆ ನ್ಯಾಯಾಲಯದ ಆದೇಶವನ್ನು ಕಡೆಗಣಿಸಿದ್ದರು ಎನ್ನಲಾಗಿದೆ.

ಈ ಪ್ರಕರಣ ಸಂಬಂಧ 17 ಬಾರಿ ಇಲಾಖೆ ವತಿಯಿಂದ ಬಾಕಿ ಹಣ ಪಾವತಿಸುವಂತೆ ಮನವಿ ಮಾಡಲಾಗಿತ್ತು. ಆದರೂ ಇವರು ಈ ನೋಟಿಸ್‌ಗಳನ್ನು ನಿರ್ಲಕ್ಷಿಸಿ ತೆರಿಗೆ ಹಣ ಮರುಪಾವತಿಸದೆ ವಂಚಿಸಿದ್ದ ಆರೋಪದ ಮೇಲೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News