ಹನೂರು: ಬೆಂಕಿ ಅವಘಡದಿಂದ ಹಾನಿಗೀಡಾದ ಮನೆಗಳಿಗೆ ಶಾಸಕ ನರೇಂದ್ರ ಭೇಟಿ

Update: 2019-02-18 16:08 GMT

ಹನೂರು,ಫೆ.18: ದಿನ್ನಳ್ಳಿ ಗ್ರಾಮದಲ್ಲಿ ಕಳೆದ ವಾರ ಬೆಂಕಿ ಅವಘಡದಿಂದ ಹಾನಿಗೀಡಾದ ಮನೆಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ನರೇಂದ್ರ ರಾಜುಗೌಡ ಭೇಟಿ ನೀಡಿ, ಸರ್ಕಾರದ ವತಿಯಿಂದ ಮನೆ ನಿರ್ಮಾಣಕ್ಕೆ ಸಹಾಯ ಧನ ನೀಡಲಾಗುವುದು ಎಂದು ಹೇಳಿದರು.

ತಾಲೂಕಿನ ದಿನ್ನಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಬೆಂಕಿ ಅವಘಡದಿಂದ ಹಾನಿಗೀಡಾದ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಶಾಸಕರು, ಮೀಣ್ಯಂ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲ್ಪಸಂಖ್ಯಾತರಿಗೆ 15 ಮನೆಗಳು ಮಂಜೂರಾಗಿದ್ದು, ಬೆಂಕಿ ಅವಘಡದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡಿಕೊಡಳ್ಳಲು ಪ್ರಥಮ ಆದ್ಯತೆ ನೀಡಿ ಮನೆ ನಿರ್ಮಿಸಿಕೊಡುವ ಭರವಸೆಯನ್ನು ಕುಟಂಬಸ್ಥರಿಗೆ ನೀಡಿದರು.

ಇದೇ ಸಂದರ್ಭದಲ್ಲಿ ಈ ಬೆಂಕಿ ಅವಘಡದಿಂದ ಹಾನಿಗೀಡಾದ ಅಬ್ದುಲ್‍ ಮುನಾಫ್ ಮತ್ತು ಅಬ್ದುಲ್‍ ರಿಯಾಜ್ ಮನೆಯವರಿಗೆ ಜಿ.ಪಂ ನೈಸರ್ಗಿಕ ವಿಕೋಪದಡಿಯಲ್ಲಿ ತಲಾ 10 ಸಾವಿರ ವೈಯಕ್ತಿಕ ಧನಸಹಾಯ ನೀಡಿದರು.

ಗ್ರಾಮ ಪಂಚಾಯತಿ ಅಧಿಕಾರಿಗೆ ತರಾಟೆ: ಗ್ರಾಮದಲ್ಲಿ ವಾಟರ್ ಟ್ಯಾಂಕ್ ತುಂಬಿ ಕುಡಿಯುವ ನೀರು ಚರಂಡಿಯಲ್ಲಿ ಹರಿಯುತ್ತಿರುವುದನ್ನು ಮತ್ತು  ಚರಂಡಿಯಲ್ಲಿ ಹೂಲು ತುಂಬಿರುವುದನ್ನು ಗಮನಿಸಿದ ಶಾಸಕರು ಗ್ರಾ.ಪಂ ಕಾರ್ಯದರ್ಶಿ ಕೃಷ್ಣಮೂರ್ತಿಯನ್ನು ತರಾಟೆಗೆ ತೆಗೆದುಕೊಂಡರು.

ಡೆಕ್‍ ಸ್ಲ್ಯಾಬ್ ನಿರ್ಮಿಸಿ: ಗ್ರಾಮದ ಮುಖ್ಯ ದ್ವಾರದ ಬಳಿ ರಸ್ತೆಗೆ ಅಡ್ಡಲಾಗಿ ಚರಂಡಿಯಿದ್ದು, ಆ ಚರಂಡಿಯ ಡೆಕ್‍ಸ್ಲ್ಯಾಬ್ ಕುಸಿದಿರುವ ಪರಿಣಾಮ ಚರಂಡಿಯ ನೀರೆಲ್ಲಾ ರಸ್ತೆಯಲ್ಲಿಯೇ ಹರಿಯುತ್ತದೆ ಎಂದು ಸಾರ್ವಜನಿಕರು ಮನವಿ ಪತ್ರವನ್ನು ಶಾಸಕರಿಗೆ ನೀಡಿದರು. ತಕ್ಷಣವೇ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ 1 ಲಕ್ಷ ವೆಚ್ಚದಲ್ಲಿ ಡೆಕ್‍ಸ್ಲ್ಯಾಬ್ ನಿರ್ಮಿಸಲು ಮತ್ತು ಚರಂಡಿ ರಿಪೇರಿಗೆ ಅಗತ್ಯವಾದ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬಸವರಾಜು, ತಾ.ಪಂ ಸದಸ್ಯೆ ಪಾರ್ವತಿಬಾಯಿ, ಮುಖಂಡರಾದ ರವಿ ಸೇರಿ ಅನೇಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News