ರಾಜ್ಯ ವಕ್ಫ್ ಬೋರ್ಡ್ ಚುನಾವಣೆ: ಮುತವಲ್ಲಿ ವಿಭಾಗದಲ್ಲಿ 14 ಮಂದಿ ಅಭ್ಯರ್ಥಿಗಳು

Update: 2019-02-19 16:47 GMT

ಬೆಂಗಳೂರು, ಫೆ.19: ರಾಜ್ಯ ವಕ್ಫ್ ಬೋರ್ಡ್‌ಗೆ ಮುತವಲ್ಲಿ ವಿಭಾಗದಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲು ಮಾ.2ರಂದು ನಡೆಯಲಿರುವ ಚುನಾವಣೆಯಲ್ಲಿ 14 ಮಂದಿ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

ಮುತವಲ್ಲಿ ವಿಭಾಗದಿಂದ ಚುನಾಯಿತರಾಗಲು ಒಟ್ಟು 15 ಮಂದಿ ನಾಮಪತ್ರ ಸಲ್ಲಿಸಿದ್ದರು. ಫೆ.18ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದರಿಂದ, ಗುಲ್ಬರ್ಗದ ಸಜ್ಜಾದೇ ನಶೀನ್ ಖುಸ್ರೋ ಹುಸೇನಿ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ.

ಇದೀಗ ಅಂತಿಮವಾಗಿ ಕಣದಲ್ಲಿ ರಾಜ್ಯ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್, ರಾಜ್ಯ ಹಜ್ ಸಮಿತಿಯ ಮಾಜಿ ಅಧ್ಯಕ್ಷ ಗೌಸ್ ಬಾಷಾ, ನಿವೃತ್ತ ಕೆಎಎಸ್ ಅಧಿಕಾರಿ ಸೈಯದ್ ಏಜಾಝ್ ಅಹ್ಮದ್, ಅಲ್-ಅಮೀನ್ ಎಜುಕೇಷನಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಸುಭಾನ್ ಶರೀಫ್, ದಾವಣಗೆರೆ ಎಜುಕೇಷನಲ್ ಟ್ರಸ್ಟ್‌ನ ಮುಖ್ಯಸ್ಥ ಸೈಯದ್ ಸೈಫುಲ್ಲಾ ಸೇರಿದಂತೆ 14 ಮಂದಿ ಕಣದಲ್ಲಿದ್ದಾರೆ.

ಮುತವಲ್ಲಿ ವಿಭಾಗದಲ್ಲಿ ಒಟ್ಟು 931 ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಬೆಂಗಳೂರು, ಗುಲ್ಬರ್ಗ, ಬೆಳಗಾವಿ ಹಾಗೂ ಮೈಸೂರು ವಿಭಾಗದಲ್ಲಿ ಮಾ.2ರಂದು ಮತದಾನ ನಡೆಯಲಿದ್ದು, ಮಾ.7ರಂದು ಬೆಂಗಳೂರಿನಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಬೆಂಗಳೂರು ವಿಭಾಗ: ಬೆಂಗಳೂರು ನಗರ-92, ಬೆಂಗಳೂರು ಗ್ರಾಮಾಂತರ-27, ರಾಮನಗರ-20, ಶಿವಮೊಗ್ಗ-16, ದಾವಣಗೆರೆ-61, ಚಿತ್ರದುರ್ಗ-29, ಕೋಲಾರ-19, ತುಮಕೂರು-24, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 24 ಮತದಾರು ಸೇರಿದಂತೆ, ಬೆಂಗಳೂರು ವಿಭಾಗದಲ್ಲಿ ಒಟ್ಟು 312 ಮತದಾರರಿದ್ದಾರೆ.

ಮೈಸೂರು ವಿಭಾಗ: ಹಾಸನ-82, ಉಡುಪಿ-21, ಚಾಮರಾಜನಗರ-9, ದಕ್ಷಿಣ ಕನ್ನಡ-18, ಕೊಡಗು-15, ಮಂಡ್ಯ-21, ಚಿಕ್ಕಮಗಳೂರು ಜಿಲ್ಲೆಯಲ್ಲಿ 31 ಮತದಾರರು ಸೇರಿದಂತೆ ಮೈಸೂರು ವಿಭಾಗದಲ್ಲಿ ಒಟ್ಟು 209 ಮತದಾರರಿದ್ದಾರೆ.

ಬೆಳಗಾವಿ ವಿಭಾಗ: ಬೆಳಗಾವಿ-16, ಬಿಜಾಪುರ-53, ಹಾವೇರಿ-25, ಗದಗ-14, ಬಾಗಲಕೋಟೆ-11, ಉತ್ತರ ಕನ್ನಡ ಕಾರವಾರ-4, ಧಾರವಾಡ ಜಿಲ್ಲೆಯಲ್ಲಿ 54 ಮತದಾರರು ಸೇರಿದಂತೆ ಬೆಳಗಾವಿ ವಿಭಾಗದಲ್ಲಿ ಒಟ್ಟು 177 ಮತದಾರರಿದ್ದಾರೆ.

ಗುಲ್ಬರ್ಗ ವಿಭಾಗ: ಗುಲ್ಬರ್ಗ-57, ಬೀದರ್-26, ಕೊಪ್ಪಳ-15, ಯಾದಗಿರಿ-21, ಬಳ್ಳಾರಿ-87, ರಾಯಚೂರು ಜಿಲ್ಲೆಯಲ್ಲಿ 9 ಮತದಾರರು ಸೇರಿದಂತೆ ಗುಲ್ಬರ್ಗದಲ್ಲಿ ಒಟ್ಟು 215 ಮತದಾರರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News