ಸೂರ್ಯಕಿರಣ್ ಜೆಟ್‌ಗಳ ಢಿಕ್ಕಿ...
Update: 2019-02-19 23:35 IST
ಯಲಹಂಕದ ವಾಯು ನೆಲೆಯಲ್ಲಿ ಏರೋ ಇಂಡಿಯಾ ತಾಲೀಮು ವೇಳೆ ಎರಡು ಯುದ್ಧ ವಿಮಾನಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ, ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ(36) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರು ಪೈಲಟ್‌ಗಳಿಗೆ ಗಾಯಗಳಾಗಿವೆ. ಢಿಕ್ಕಿಯ ಮುನ್ಸೂಚನೆ ಅರಿತ ಎರಡು ಯುದ್ಧ ವಿಮಾನಗಳ ಪೈಲಟ್‌ಗಳು ಸಮಯಪ್ರಜ್ಞೆ ತೋರಿ ತುರ್ತು ಗುಂಡಿ ಅನ್ನು ಒತ್ತಿದ್ದಾರೆ. ಪ್ಯಾರಾಚೂಟ್ ತೆರೆದುಕೊಂಡು ಕೆಳಗಿಳಿಯಲು ಹೋದಾಗ ಪೈಲಟ್ ವಿಂಗ್ ಕಮಾಂಡರ್ ಸಾಹಿಲ್‌ಗಾಂಧಿ (36) ಅವರಿಗೆ ತಲೆಗೆ ಗಂಭೀರ ಪೆಟ್ಟು ಬಿದ್ದು, ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.