ಶಾಂತಯ್ಯ ಪರಡಿಮಠ ರಚಿಸಿದ ಕಲಾತ್ಮಕ ಚಿತ್ರಗಳು ಜೀನಿಯಸ್ ಬುಕ್‍ ಆಫ್‍ ರೆಕಾರ್ಡ್‍ಗೆ ಸೇರ್ಪಡೆ

Update: 2019-02-19 18:18 GMT

ದಾವಣಗೆರೆ,ಫೆ.19: ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ ಕಿರಿಯ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸರಳವಾದ ಬೋಧನೆಗೆ ಮತ್ತು ಚಿತ್ರಕಲಾ ಕಲಿಕೆಗೆ ಸಹಕಾರಿಯಾಗಲು ಕಂಡುಕೊಂಡ ಹೊಸ ವಿಧಾನ ಇಂಗ್ಲೀಷ್ ಮೂಲಾಕ್ಷರಗಳಿಂದ ರಚಿಸಿದ ಕಲಾತ್ಮಕ ಚಿತ್ರಗಳು ಯುನೈಟೆಡ್ ಕಿಂಗ್‍ಡಮ್‍ನ ಜೀನಿಯಸ್ ಬುಕ್‍ ಆಫ್‍ ರೆಕಾರ್ಡ್‍ಗೆ ಸೇರ್ಪಡೆಗೊಂಡಿವೆ.

ಬೆಂಗಳೂರಿನಲ್ಲಿ ಕರ್ನಾಟಕದ ಕೋ-ಆರ್ಡಿನೇಟರ್ ಸುಪ್ರಿಯಾ ರಾಮಗೋಪಾಲ ಜೀನಿಯಸ್ ಬುಕ್‍ ಆಫ್‍ ರೆಕಾರ್ಡ್ ಸರ್ಟಿಫಿಕೇಟ್, ಮೆಡಲ್, ನೆನಪಿನ ಕಾಣಿಗೆ ನೀಡಿ ಗೌರವಿಸಿದ್ದಾರೆ. ಶಾಂತಯ್ಯ ಪರಡಿಮಠ ದಾವಣಗೆರೆಯ ಶ್ರೀ ಜಯದೇವಜಗದ್ಗುರು ಮುರುಘರಾಜೇಂದ್ರ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News