ಉತ್ತರಪ್ರದೇಶದಲ್ಲಿ ಲಘು ಭೂಕಂಪ: ದಿಲ್ಲಿಯಲ್ಲಿ ಕಂಪನ

Update: 2019-02-20 05:12 GMT

ಹೊಸದಿಲ್ಲಿ, ಫೆ.20: ಉತ್ತರ ಪ್ರದೇಶದ ಬಾಘ್ಪಾತ್‌ನಲ್ಲಿ ಬುಧವಾರ ಬೆಳಗ್ಗೆ 7:59ರ ಸುಮಾರಿಗೆ ಲಘು ಭೂಕಂಪವಾಗಿದ್ದು , ಭೂಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 4.0ರಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ದಿಲ್ಲಿ-ಎನ್‌ಸಿಆರ್ ವಲಯದಲ್ಲಿ ಭೂಕಂಪಿಸಿದ ಅನುಭವವಾಗಿದೆ. ಬಾಘ್ಪಾತ್, ದಿಲ್ಲಿಯಿಂದ 40 ಕಿ.ಮೀ. ದೂರದಲ್ಲಿದೆ.

ಭೂಕಂಪನದ ಆಳ 6 ಕಿ.ಮೀ.ನಷ್ಟಿತ್ತು ಎಂದು ಹವಾಮಾನ ಇಲಾಖೆ ವೆಬ್‌ಸೈಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News