ಫೆ.21ರಂದು ರಾಜ್ಯಕ್ಕೆ ಅಮಿತ್ ಶಾ

Update: 2019-02-20 12:46 GMT

ಬೆಂಗಳೂರು, ಫೆ. 20: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಳೆ(ಫೆ.21) ವಿಶೇಷ ವಿಮಾನದಲ್ಲಿ ರಾಜ್ಯಕ್ಕೆ ಆಗಮಿಸಲಿದ್ದು, ದೇವನಹಳ್ಳಿ ಬಳಿ ಆವತಿಯಲ್ಲಿ ಅನಂತ ವಿದ್ಯಾನಿಕೇತನದಲ್ಲಿ ಮಧ್ಯಾಹ್ನ 3.45ಕ್ಕೆ ನಡೆಯಲಿರುವ ‘ಶಕ್ತಿ ಕೇಂದ್ರ ಪ್ರಮುಖರ’ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಸಂಜೆ 5ಗಂಟೆಗೆ ಯಲಹಂಕದ ಖಾಸಗಿ ಹೊಟೇಲ್ ನಲ್ಲಿ ಪಕ್ಷದ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 7.15ಕ್ಕೆ ಲೋಕಸಭಾ ಪ್ರಭಾರಿಗಳು, ಸಂಚಾಲಕರು, ವಿಸ್ತಾರಕರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ವಿಭಾಗ ಸಂಘಟನಾ ಕಾರ್ಯದರ್ಶಿಗಳು, ಕ್ಲಸ್ಟರ್‌ಗಳ ಉಸ್ತುವಾರಿಗಳ ಸಭೆಯಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ.

ಫೆ.21ರ ರಾತ್ರಿ 9ಗಂಟೆಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದು, ರಾತ್ರಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಫೆ.22ರ ಶುಕ್ರವಾರ ಹೊಸದಿಲ್ಲಿಗೆ ತೆರಳಲಿದ್ದಾರೆಂದು ಬಿಜೆಪಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News