ಫೆ.22 ರಿಂದ ಎಮ್ಮೆಮಾಡು ಉರೂಸ್

Update: 2019-02-20 17:18 GMT

ಮಡಿಕೇರಿ ಫೆ.20 : ಸರ್ವ ಧರ್ಮ ಸಮನ್ವಯತೆಯನ್ನು ಸಾರುತ್ತಾ ವರ್ಷಂಪ್ರತಿ ಹಝ್ರತ್ ಸೂಫೀ ಶಹೀದ್(ರ) ಮತ್ತು ಸಯ್ಯಿದ್ ಹಸನ್ ಸಖಾಫ್ ಅಲ್ ಹಳ್ರಮಿ(ರ) ಹಾಗೂ ಇತರ ಮಹಾನುಭಾವರ ಹೆಸರಿನಲ್ಲಿ ಎಮ್ಮೆಮಾಡಿನಲ್ಲಿ ನಡೆಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಉರೂಸ್ ಸಮಾರಂಭ ಇದೇ ಫೆ. 22 ರಿಂದ ಮಾ.1ರ ವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್‍ನ ಪ್ರಧಾನ ಕಾರ್ಯದರ್ಶಿ ಕೆ.ಎಂ. ಹುಸೈನ್ ಹಾಜಿ,  ಆರಂಭಿಕ  ದಿನವಾದ ಫೆ. 22 ರಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್‍ನ ಅಧ್ಯಕ್ಷರಾದ ಉಸ್ಮಾನ್ ಹಾಜಿ ಧ್ವಜಾರೋಹಣವನ್ನು ನೆರವೇರಿಸಲಿದ್ದು, ಉರೂಸ್ ಉದ್ಘಾಟನೆ ಮತ್ತು ಸಾಮೂಹಿಕ ವಿವಾಹದ ನೇತೃತ್ವವನ್ನು ಪಾಣಕ್ಕಾಡ್ ಸಯ್ಯಿದ್ ಮುನವ್ವಿರಲಿ ಶಿಹಾಬ್ ತಂಙಳ್ ವಹಿಸಲಿದ್ದಾರೆ ಎಂದರು.

ಸಮಾರಂಭದ ವೇದಿಕೆಯಲ್ಲಿ ಎಮ್ಮೆಮಾಡು ಸಯ್ಯಿದ್ ಕೋಯಮ್ಮ ತಂಙಳ್, ಬಾಣಪುರದ ಸಯ್ಯಿದ್ ಪೂಕೋಯ ತಂಙಳ್, ಎಮ್ಮೆಮಾಡು ಶಹೀದಿಯ ಅನಾಥಾಲಯದ ಅಧ್ಯಕ್ಷ ಸಿ.ಎ. ಹಸೈನಾರ್ ಹಾಜಿ, ಎಮ್ಮೆಮಾಡು ಟಿಐಎಂಜೆ ಮಾಜಿ ನಿರ್ದೇಶಕ ಕೆ.ಎ.ಅಬ್ದುಲ್ ಖಾದರ್ ಹಾಜಿ, ಮಾಜಿ ಅಧ್ಯಕ್ಷ ಸಿ.ಇ. ಶಾದುಲಿ ಹಾಜಿ, ಕೆ.ಎಸ್.ಖಾದರ್ ಹಾಜಿ, ಸಿ.ಎ.ಹಸೈನಾರ್ ಹಾಜಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಅಂದು ರಾತ್ರಿ 8 ಗಂಟೆಗೆ ನಡೆಯುವ ಧಾರ್ಮಿಕ ಪ್ರವಚನವನ್ನು ಎಮ್ಮೆಮಾಡು ಮುದರಿಸ್ ಉಮ್ಮರ್ ಸಖಾಫಿ ಅಝ್ಹರಿ ಅಲ್ ಕಾಮಿಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಇಬ್ರಾಹಿಂ ಸಖಾಫಿ ತಾತೂರು ಭಾಗವಹಿಸಲಿದ್ದಾರೆ.

ಫೆ. 23 ರಂದು ರಾತ್ರಿ 8 ಗಂಟೆಗೆ ದ್ಸಿಕ್ರ್ ಹಲ್ಖ ನಡೆಯಲಿದ್ದು, ಇದರ ನೇತೃತ್ವವನ್ನು ಉಜಿರೆ ತಂಙಳ್ ಸಯ್ಯಿದ್ ಜಲಾಲುದ್ದೀನ್ ಅಲ್ ಹಾದಿ ಮದನಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಏಣಿಯಾಡಿ ಮುದರಿಸ್ ಸಯ್ಯಿದ್ ಸಾಲಿಂ ತಂಙಳ್ ಸಖಾಫಿ ನೆರವೇರಿಸಲಿದ್ದು, ಜಝೀಲ್ ಅಹ್ಸನಿ ಗೂಡಲ್ಲೂರ್ ಉಪನ್ಯಾಸ ನೀಡಲಿದ್ದಾರೆ.

ಫೆ. 24 ರಂದು ರಾತ್ರಿ 7 ಗಂಟೆಗೆ ಕಡಲುಂಡಿ ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಅವರ ನೇತೃತ್ವದಲ್ಲಿ ಖತಂ ದುಅ ನಡೆಯಲಿದ್ದು, ರಾತ್ರಿ 8 ಗಂಟೆಗೆ ಕಾಸರಗೋಡಿನ ಯು.ಕೆ. ಹನೀಫ್ ನಿಝಾಮಿ ಧಾರ್ಮಿಕ ಪ್ರವಚನ ಮಾಡಲಿದ್ದಾರೆ.

ಫೆ.25 ರಂದು ಕಾಸರಗೋಡಿನ ಜಾಮಿಅ ಶಅದಿಯ ಅಧ್ಯಕ್ಷ ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್ ಅವರ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು,  ಕೋಝಿಕೋಡ್ ಖಾಝಿ ಸಯ್ಯಿದ್ ನಾಸೀರ್ ಹಯ್ಕ್ ತಂಙಳ್ ಪಾಣಕ್ಕಾಡ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಮುಖ್ಯ ಭಾಷಣವನ್ನು ಕುಟ್ಟಿಯಾಡಿ ಸಿರಾಹುಜುಲ್ ಹುದಾ ಪ್ರಿನ್ಸಿಪಾಲರಾದ ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಹಾಗೂ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ  ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ನಾಯಿಬ್ ಖಾಝಿ ಕೆ.ಎ. ಮಹಮೂದ್ ಮುಸ್ಲಿಯಾರ್ ಎಡಪಾಲ, ಎಂ.ಎಂ. ಅಬ್ದುಲ್ಲ ಫೈಝಿ ಎಡಪಾಲ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್, ವಸತಿ ಸಚಿವರಾದ ಯು.ಟಿ.ಖಾದರ್, ವೀರಾಜಪೇಟೆ ಶಾಸಕರಾದ ಕೆ.ಜಿ. ಬೋಪಯ್ಯ, ಬೆಂಗಳೂರು ಶಾಂತಿ ನಗರದ ಶಾಸಕರಾದ ಎನ್. ಹಾರಿಸ್, ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್. ವಿಶ್ವನಾಥ್, ಮಡಿಕೇರಿ ಎಡಿಎಲ್‍ಆರ್ ಷಂಶುದ್ದೀನ್, ಎಮ್ಮೆಮಾಡು ಗ್ರಾ. ಪಂ. ಅಧ್ಯಕ್ಷರಾದ ಆಲಿ ಕುಟ್ಟಿ, ಕೊಡಗು ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷರಾದ ಎಂ.ಹೆಚ್. ಅಬ್ದುಲ್ ರೆಹಮಾನ್, ಎಮ್ಮೆಮಾಡು ಟಿಐಎಂಜೆ ಉಪಾಧ್ಯಕ್ಷರಾದ ಕೆ.ಇ.ಆಮು ಹಾಜಿ, ಕಾಟರಕೊಲ್ಲಿ ಎ.ಎ.ಎರಮು ಹಾಜಿ ಪಾಲ್ಗೊಳ್ಳಲಿದ್ದಾರೆ.

ಅಂದು ರಾತ್ರಿ 8 ಗಂಟೆಗೆ ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಧಾರ್ಮಿಕ ಪ್ರವಚನ ನೀಡಲಿದ್ದು, ವೇದಿಕೆಯಲ್ಲಿ ಎಮ್ಮೆಮಾಡು ಟಿಐಎಂಜೆ ಕಮಿಟಿ ಸದಸ್ಯರಾದ ಸಿ.ಎಸ್.ಇಬ್ರಾಹಿ, ಶಹೀದಿಯ ಅನಾಥಾಲಯದ ಕಾರ್ಯದರ್ಶಿ ಪಿ.ಕೆ. ಮೂಸ ಭಾಗವಹಿಸಲಿದ್ದಾರೆ.

ಫೆ. 26 ರಂದು ರಾತ್ರಿ 8 ಗಂಟೆಗೆ ಮಟ್ಟನ್ನೂರ್ ಸಲೀಂ ಫೈಝಿ ಇರ್ಫಾನಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಫೆ. 27 ರಂದು ಬೆಳಿಗ್ಗೆ 10 ಗಂಟೆಗೆ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೊಯಮ್ಮ ತಂಙಳ್ ಮದನಿ ಕೂರ ಅವರ ನೇತೃತ್ವದಲ್ಲಿ ದುಅಃ ಮಜಿಲಿಸ್ ನಡೆಯಲಿದ್ದು, ರಾತ್ರಿ 8 ಗಂಟೆಗೆ ಇಸ್ಮಾಯಿಲ್ ಮಿಸ್ಬಾಹಿ ಚೆರುಮೋತ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ಫೆ. 28 ರಂದು ಆಟೀರಿ ತಂಙಳ್ ಸಯ್ಯಿದ್ ಅಬ್ದುಲ್ ರಹ್ಮಾನ್ ಧಾರಿಮಿ ಅವರ ನೇತೃತ್ವದಲ್ಲಿ ಸ್ವಲಾತುನ್ನಾರಿಯ್ಯ ಮಜ್ಲಿಸ್  ನಡೆಯಲಿದ್ದು, ರಾತ್ರಿ 8 ಗಂಟೆಗೆ ಸ್ವಾಲಿಹ್ ಅನ್ವರಿ ಚೇಗನ್ನೂರು ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ಮಾ.1 ರಂದು ಸಮಾರೋಪ ಸಮ್ಮೇಳನ ನಡೆಯಲಿದ್ದು, ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ತಾಜುಲ್ ಫುಖಹಾ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಾಮಾದ ಅಧ್ಯಕ್ಷರಾದ ಶರಫುಲ್ ಉಲಮಾ ಪಿ.ಎಂ.ಅಬ್ಬಾಸ್ ಉಸ್ತಾದ್ ಮಂಜನಾಡಿ ವಹಿಸಲಿದ್ದಾರೆ.

ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮದ ಪ್ರಧಾನ ಕಾರ್ಯದರ್ಶಿ ಮತ್ತು ಖಾಝಿಗಳಾದ ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬುಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ.

ವೇದಿಕೆಯಲ್ಲಿ ಎಮ್ಮೆಮಾಡು ಟಿಐಎಂಜೆ ಕಮಿಟಿ ಸದಸ್ಯರಾದ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೂಸಿ, ಕಿಲ್ಲೂರು ತಂಙಳ್ ಸಯ್ಯಿದ್ ಶಿಹಾಬುದ್ದೀನ್ ತಂಙಳ್, ಎಮ್ಮೆಮಾಡು ಟಿಐಎಂಜೆ ಅಧ್ಯಕ್ಷರಾದ ಬಿ.ಎಂ. ಉಸ್ಮಾನ್ ಹಾಜಿ ಭಾಗವಹಿಸಲಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಕಮಿಟಿಯ ಸದಸ್ಯರಾದ ಇಲಿಯಾಸ್ ಹಾಗೂ ಸಿ.ಎನ್. ಸದರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News