ಸೌದಿ ಯುವರಾಜನಿಗೆ ಚಿನ್ನ ಲೇಪಿತ ಸಬ್ ಮೆಷಿನ್ ಗನ್ ಉಡುಗೊರೆ

Update: 2019-02-21 07:25 GMT

ಕರಾಚಿ, ಫೆ.21: ಸೌದಿ ಅರೇಬಿಯಾದ ಯುವರಾಜ್ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಪಾಕಿಸ್ತಾನ ಸರಕಾರ ಚಿನ್ನ ಲೇಪಿತ ಸಬ್ ಮೆಷಿನ್ ಗನ್ ನ್ನು ಉಡುಗೊರೆಯಾಗಿ ನೀಡಿದೆ.

ಇಂತಹ ಅಪರೂಪದ ಉಡುಗೊರೆಯನ್ನು ಯುವರಾಜ ಯಾವುದೇ ಸಂಕೋಚವಿಲ್ಲದೆ ಸ್ವೀಕರಿಸಿದ್ದಾರೆ. ಶಸ್ತ್ರಾಸ್ತ್ರವನ್ನು ಉಡುಗೊರೆ ಸ್ವೀಕರಿಸುವ ವಿಚಾರದಲ್ಲಿ ಕೆಲವು ಶಿಷ್ಟಾಚಾರಗಳಿರುತ್ತದೆ. ಆದರೆ ಸೌದಿ ಯುವರಾಜ ಸಂತಸದಿಂದಲೇ ಚಿನ್ನ ಲೇಪಿತ ಸಬ್ ಮೆಷಿನ್ ಗನ್   ಉಡುಗೊರೆ ಪಡೆದಿದ್ದಾರೆ. ಜರ್ಮನಿಯಲ್ಲಿ ಅಭಿವೃದ್ಧಿ ಪಡೆಸಲಾದ ಗನ್ ನ್ನು ಚಿನ್ನದ ಲೇಪನದೊಂದಿಗೆ ಮಾಡಿಫೈ ಮಾಡಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News