ತಿತಿಮತಿ: ಬಡ ಹೆಣ್ಣು ಮಗಳ ವಿವಾಹ, ಧಾರ್ಮಿಕ ಪ್ರವಚನ

Update: 2019-02-21 11:55 GMT

ಸಿದ್ದಾಪುರ, ಫೆ.21: ಇಲ್ಲಿನ ತಿತಿಮತಿಯ ಖುವ್ವತುಲ್ ಇಸ್ಲಾಂ ರಿಲೀಫ್ ಸಮಿತಿಯ ವತಿಯಿಂದ ಶೈಖುನಾ ಅತ್ತಿಪಟ್ಟ ಮೊಯ್ದಿನ್ ಕುಟ್ಟಿ ಮುಸ್ಲಿಯಾರ್ ಅನುಸ್ಮರಣೆ, ಧಾರ್ಮಿಕ ಪ್ರವಚನ ಮತ್ತು ಬಡ ಹೆಣ್ಣು ಮಗಳ ವಿವಾಹ ಕಾರ್ಯಕ್ರಮ ತಿತಿಮತಿಯ ಶಂಸುಲ್ ಉಲಮಾ ನಗರದಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷ ಎಂ.ಎಸ್.ಅಬ್ದುಲ್ ಜಲೀಲ್ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭ ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೈಯದ್ ಮುಹಮ್ಮದ್ ಕೋಯ ತಂಙಳ್ ನೇತೃತ್ವದಲ್ಲಿ ನಿಖಾಹ್ ಕಾರ್ಯಕ್ರಮ ನಡೆಯಿತು. ಅಲ್ ಹಾಫಿಳ್ ಸಿರಾಜುದ್ದೀನ್ ಅಲ್ ಖಾಸಿಮಿ ಮುಖ್ಯಭಾಷಣ ಮಾಡಿದರು. ಕೊಡಗು ಜಿಲ್ಲಾ ಖಾಝಿ ಎಂ.ಎಂ.ಅಬ್ದುಲ್ಲಾ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಮುಖರಾದ ಇಸ್ಮಾಯಿಲ್ ಮುಸ್ಲಿಯಾರ್, ಮಾಹಿನ್ ದಾರಿಮಿ, ವಿ.ಎಂ.ಮೊಯ್ದಿನ್, ಟಿ.ಎಸ್.ಇಬ್ರಾಹೀಂ ಮುಸ್ಲಿಯಾರ್, ಬಶೀರ್ ಹಾಜಿ, ಫೈಝಲ್ ಫೈಝಿ, ವಿನಯ್ ಕುಮಾರ್, ಪಿ.ಎಂ.ಬಶೀರ್, ತಂಲೀಕ್ ದಾರಿಮಿ, ಶಿವಕುಮಾರ್, ಪಿ.ಎಂ.ಅಬ್ದುರ್ರಝಾಕ್, ಹನೀಫ್ ಹಾಜಿ, ಉಸ್ಮಾನ್ ಹಾಜಿ, ರಾಜೀವ್ ನಂಜಪ್ಪ, ಎಂ.ರಾಮಕೃಷ್ಣ, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News