ಯೋಧ ಗುರು ಕುಟುಂಬಕ್ಕೆ ಸುಮಲತಾ ಅಂಬರೀಶ್ ಸಾಂತ್ವನ

Update: 2019-02-21 14:39 GMT

ಕಾಳಮುದ್ದನದೊಡ್ಡಿ, ಫೆ.21: ಪುಲ್ವಾಮಾ ಉಗ್ರದಾಳಿಯ ಹುತಾತ್ಮ ಯೋಧ ಎಚ್.ಗುರು ಕುಟುಂಬಕ್ಕೆ ಚಿತ್ರನಟಿ ಸುಮಲತಾ ಅಂಬರೀಶ್ ಗುರುವಾರ  ಭೇಟಿ ನೀಡಿ ಸಾಂತ್ವಾನ ಹೇಳಿದರು.

ಗುರುರವರ ತಂದೆ ಹೊನ್ನಯ್ಯ, ತಾಯಿ ಚಿಕ್ಕೋಳಮ್ಮ, ಪತ್ನಿ ಕಲಾವತಿರವರನ್ನು ನೋಡಿ ದುಃಖಿಸಿ ತನ್ನ ಪತಿ ಅಂಬರೀಶ್‍ರವರನ್ನು ಈ ಸಂದರ್ಭದಲ್ಲಿ ನೆನೆದರು.

ಅಂಬರೀಶ್‍ಗೆ ಪಿತ್ರಾರ್ಜಿತವಾಗಿ ಬಂದಿದ್ದ ದೊಡ್ಡರಸಿನಕೆರೆಯ 6.5 ಎಕರೆ ಕೃಷಿಭೂಮಿಯಲ್ಲಿ ಅರ್ಧ ಎಕರೆ ಭೂಮಿಯನ್ನು ಭರವಸೆ ನೀಡಿದಂತೆ ಯೋಧನ ಕುಟುಂಬಕ್ಕೆ ಸುಮಲತಾ ದಾಖಲೆ ಹಸ್ತಾಂತರಿಸುವ ಬಗ್ಗೆ ಮಾತನಾಡಿದರು.

ಈ ಹಿಂದೆಯಷ್ಟೆ ಅಂಬರೀಶ್‍ರವರು ಅಭಿಷೇಕ್‍ರವರ ಹೆಸರಿಗೆ ಪಹಣಿಯನ್ನು ಮಾಡಲಾಗಿತ್ತು. ಈ ಭೂಮಿಗೆ ಉತ್ತಮವಾದ ನೀರಾವರಿ ಸೌಲಭ್ಯವಿದೆ. ನೀರಾವರಿ ಜಮೀನಾಗಿರುವ ಈ ಭೂಮಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಗುಡಿಗೆರೆ ಕಾಲನಿಯಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. 
ಇದಕ್ಕೂ ಮೊದಲು ಚಿಕ್ಕರಸಿನಕೆರೆ ಕಾಲಭೈರವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪುತ್ರ ಅಭಿಷೇಕ್‍ನೊಂದಿಗೆ ಪೂಜೆ ಸಲ್ಲಿಸಿದರು. ನಂತರ ದಾನನೀಡುವ ದೊಡ್ಡರಸಿನಕೆರೆ ಗ್ರಾಮದಲ್ಲಿರುವ ಕೃಷಿ ಭೂಮಿಯನ್ನು ವೀಕ್ಷಿಸಿದರು. ಆ ನಂತರ ಕೆ.ಎಂ.ದೊಡ್ಡಿ ಹೊರಹೊಲಯದಲ್ಲಿರುವ ಹುತಾತ್ಮ ಯೋಧ ಗುರು ಸಮಾಧಿಗೆ ನಮನ ಸಲ್ಲಿಸಿದರು.

ಇದೇ ವೇಳೆ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ತೊರೆಚಾಕನಹಳ್ಳಿ ಶಂಕರೇಗೌಡ, ನಟ ದೊಡ್ಡಣ್ಣ, ಕಾಂಗ್ರೇಸ್ ಮುಖಂಡ ಜ್ಯೋಗಿಗೌಡ ಸೇರಿದಂತೆ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News