ರಾಜ್ಯದಲ್ಲಿ 5.03 ಕೋಟಿ ಮತದಾರರು: ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್

Update: 2019-02-21 15:47 GMT

ಬೆಂಗಳೂರು, ಫೆ.21: ರಾಜ್ಯದಲ್ಲಿನ ಮತದಾರರ ಅಂತಿಮ ಪಟ್ಟಿಯನ್ನು ಜ.16ರಂದು ಪ್ರಕಟಿಸಲಾಗಿದ್ದು, 2,54,55,976 ಪುರುಷ, 2,48,46,488 ಮಹಿಳಾ ಹಾಗೂ 28,966 ಇತರ ಮತದಾರರು ಸೇರಿ ಒಟ್ಟು 5,03,07,182 ಮತದಾರರಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ಗುರುವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೇವಾ ಮತದಾರರಿಗೆ ಸಂಬಂಧಪಟ್ಟಂತೆ ಅಂತಿಮ ಮತದಾರರ ಪಟ್ಟಿಯನ್ನು ಫೆ.22ರಂದು ಪ್ರಕಟಿಸಲಾಗುವುದು. ಇಲ್ಲಿಯವರೆಗೆ 39,351 ಸೇವಾ ಮತದಾರರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.

ಬೆಳಗಾವಿ-37,02,138, ಬಾಗಲಕೋಟೆ-14,87,972, ಬಿಜಾಪುರ-17,62,267, ಗುಲ್ಬರ್ಗ-21,04,960, ಬೀದರ್-13,42,792, ರಾಯಚೂರು- 16,10,369, ಕೊಪ್ಪಳ-10,39,289, ಗದಗ-8,97,697, ಧಾರವಾಡ-14,71,927, ಉತ್ತರ ಕನ್ನಡ-11,59,861, ಹಾವೇರಿ-11,80,777, ಬಳ್ಳಾರಿ-19,64,093, ಚಿತ್ರದುರ್ಗ-13,12,840, ದಾವಣಗೆರೆ-16,45,351, ಶಿವಮೊಗ್ಗ-14,21,235, ಉಡುಪಿ-10,05,172.
ಚಿಕ್ಕಮಗಳೂರು-9,26,035, ತುಮಕೂರು-21,93,035, ಚಿಕ್ಕಬಳ್ಳಾಪುರ- 10,11,717, ಕೋಲಾರ-11,99,188, ಬೆಂಗಳೂರು ಗ್ರಾಮಾಂತರ-8,12,902, ರಾಮನಗರ-8,65,554, ಮಂಡ್ಯ-14,85,065, ಹಾಸನ-14,29,765, ದಕ್ಷಿಣ ಕನ್ನಡ-16,97,417, ಕೊಡಗು-4,34,256, ಮೈಸೂರು-24,65,102.
ಚಾಮರಾಜನಗರ-8,29,696, ಬಿಬಿಎಂಪಿ(ಕೇಂದ್ರ)-16,97,144, ಬಿಬಿಎಂಪಿ (ಉತ್ತರ)-20,53,426, ಬಿಬಿಎಂಪಿ(ದಕ್ಷಿಣ)-19,56,937, ಬೆಂಗಳೂರು ನಗರ-31,73,559, ಯಾದಗಿರಿ ಜಿಲ್ಲೆಯಲ್ಲಿ 9,67,644 ಮತದಾರರಿದ್ದಾರೆ ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದರು.

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮ ಅವಧಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವಿಕೆ, ತಿದ್ದುಪಡಿಗಾಗಿ ಒಟ್ಟು 17.45 ಲಕ್ಷ ಅರ್ಜಿಗಳು ಸ್ವೀಕೃತವಾಗಿದ್ದವು. 6.35 ಲಕ್ಷ ಅರ್ಹ ಮತದಾರರನ್ನು ನೋಂದಾಯಿಸಿಕೊಳ್ಳಲಾಗಿದೆ. 7.52 ಲಕ್ಷ ಮತದಾರರನ್ನು ಕೈ ಬಿಡಲಾಗಿದ್ದು, ಈ ಪೈಕಿ 4.72 ಲಕ್ಷ ಮಂದಿ ಸ್ಥಳಾಂತಗೊಂಡಿದ್ದು, 1.95 ಲಕ್ಷ ಮಂದಿ ಮೃತಪಟ್ಟಿದ್ದಾರೆ. 80,010 ಪುನರಾವರ್ತನೆಗೊಂಡ ಮತದಾರರನ್ನು ಗುರುತಿಸಿ ಕೈಬಿಡಲಾಗಿದೆ ಎಂದು ಅವರು ಹೇಳಿದರು.

3.82 ಲಕ್ಷ ವಿಶೇಷ ಚೇತನ ಮತದಾರರನ್ನು ನೋಂದಾಯಿಸಲಾಗಿದೆ. ಜನವರಿ 25ರಂದು ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಂದು 6,97,184 ಎಪಿಕ್ ಕಾರ್ಡುಗಳನ್ನು ಹಂಚಲಾಗಿದೆ. ಉಳಿದ ಕಾರ್ಡುಗಳನ್ನು ಫೆ.23,24 ಮತ್ತು ಮಾರ್ಚ್ 2 ಹಾಗೂ 3ರಂದು ನಡೆಯುವ ವಿಶೇಷ ಕ್ಯಾಂಪ್‌ಗಳಲ್ಲಿ ವಿತರಿಸಲಾಗುವುದು ಎಂದು ಸಂಜೀವ್‌ಕುಮಾರ್ ತಿಳಿಸಿದರು.

ಸಹಾಯವಾಣಿ : ಸಾರ್ವಜನಿಕರು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ತಿಳಿದುಕೊಳ್ಳಲು, ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ, ತಿದ್ದುಪಡಿ ಮಾಡುವ, ಒಂದು ವಿಧಾನಸಭಾ ಮತಕ್ಷೇತ್ರದಿಂದ ಬೇರೆ ಮತಕ್ಷೇತ್ರಕ್ಕೆ ವರ್ಗಾಯಿಸುವ, ಮೃತ ಹಾಗೂ ಬೇರೆ ಕಡೆಗೆ ಸ್ಥಳಾಂತರಗೊಂಡವರ ಹೆಸರು ತೆಗೆದು ಹಾಕುವ, ಇತ್ಯಾದಿ ವಿಷಯಗಳ ಕುರಿತಂತೆ ಮಾಹಿತಿಯನ್ನು ಒದಗಿಸಲು ಸಹಾಯವಾಣಿ ಕೇಂದ್ರಗಳನ್ನು ರಾಜ್ಯಮಟ್ಟದಲ್ಲಿ ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯಮಟ್ಟದ ಸಹಾಯವಾಣಿ ಸಂಪರ್ಕ ಸಂಖ್ಯೆ: 1800-4255-1950, ಜಿಲ್ಲಾ ಮತದಾರರ ಸಹಾಯವಾಣಿ-ಜಿಲ್ಲೆಯ ಒಳಗಿನಿಂದ ಮಾಡುವ ಕರೆಗಳಿಗೆ 1950, ಜಿಲ್ಲೆಯ ಹೊರಗಿನಿಂದ ಮಾಡುವ ಕರೆಗಳಿಗಾಗಿ ಜಿಲ್ಲಾ ಕೇಂದ್ರದ ಎಸ್‌ಟಿಡಿ ಕೋಡ್ ಹಾಗೂ 1950 ಬಳಸಬೇಕು. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಎಲ್ಲ ದಿನಗಳಂದು ಮತದಾರರ ಸಹಾಯವಾಣಿ ಕಾರ್ಯನಿರ್ವಹಿಸುತ್ತದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಲು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ಅಂತರ್ಜಾಲ ತಾಣ www.ceokarnataka.kar.nic.in ವನ್ನು ಭೇಟಿ ನೀಡಿ.
-ಸಂಜೀವ್‌ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News