ಹನೂರು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ

Update: 2019-02-21 16:51 GMT

ಹನೂರು: ಮಲೆಮಹದೇಶ್ವರರು ನೆಲಗೊಂಡಿರುವ ಐತಿಹಾಸಿಕ ಸ್ಥಳವಾದ ಮಲೈಮಹದೇಶ್ವರಬೆಟ್ಟದ ತಪ್ಪಲಿನಲ್ಲಿ ಹನೂರು ತಾಲ್ಲೂಕು ಆದ ಬಳಿಕ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಅಂತರ್ ರಾಷ್ಟ್ರೀಯ ಜನಪದ ಗಾಯಕರು ಮತ್ತು ವಿದ್ವಾಂಶರಾದ ಡಾ.ಅಪ್ಪಗೆರೆ ತಿಮ್ಮರಾಜು ತಿಳಿಸಿದ್ದಾರೆ.

ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪದ ನಡು ಮಲೈಮಹದೇಶ್ವರ ವೇದಿಕೆಯಲ್ಲಿ ಹನೂರು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟನೆ ನೇರವೇರಿಸಿ ನಂತರ ಮಾತನಾಡಿದ ಅವರು, ಸರ್ವ ಜನಾಂಗದ ಶಾಂತಿಯ ತೋಟ ಮಲೈಮಹದೇಶ್ವರನ ಈ ನೆಲೆಯಾಗಿದ್ದು ಇಲ್ಲಿ ಸಮಾಜದ ಸರ್ವ ಜನಾಂಗವು ಇಲ್ಲಿಗೆ ಆಗಮಿಸಿ ಮಾದಪ್ಪನ ದರ್ಶನ ಪಡೆದು ಆರ್ಶಿವಾದ ಪಡೆದು ಪುನೀತರಾಗುತ್ತಾರೆ. ಈ ಮಲೈಮಹದೇಶ್ವರ ಸ್ವಾಮಿಯ ತಪ್ಪಲಿನಲ್ಲಿ ಹನೂರು ತಾಲೂಕು ಆದ ಪ್ರಥಮ ವರ್ಷದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ಒಂದು ಅರ್ಥಪೂರ್ಣವಾಗಿದೆ ಎಂದರು. 

ಪ್ರಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಎಸ್ ವಿನಯ್ ಹನೂರು ತಾಲೂಕು ಈ ರಾಜ್ಯದಲ್ಲಿ ಹೆಸರುವಾಸಿಯಾಗಲು ಕಾರಣ ಈ ಭಾಗದಲ್ಲಿ ನೆಲೆಸಿರುವ ಮಲೈಮಹದೇಶ್ವರಸ್ವಾಮಿ , ಹಾಗಾಗಿ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಲ್ಲೇ ಮಾಡಬೇಕೇಂದು ತಿರ್ಮಾನಿಸಿ ಮಾಡಲಾಗುತ್ತಿದೆ, ಯಾವುದೇ ಜಾನಪದ ಅರಿವಿಲ್ಲದೆ ಇದ್ದರೂ, ತಲೆತಲಾಂತರದಿಂದ ಮಲೈಮಹೇಶ್ವರರ ಮಹಾಕಾವ್ಯವನ್ನು ಉಳಿಸಿ ಬೆಳೆಸಿಕೊಂಡು ಇಡೀ ದೇಶದ ಆಸ್ತಿಯಾಗಿ ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರಲ್ಲದೇ ಹನೂರು ತಾಲೂಕು  ಕನ್ನಡ ಸಾಹಿತ್ಯ ಪರಿಷತ್‍ಗೆ ಅಧ್ಯಯನ ಹಾಗೂ ಗ್ರಂಥಾಲಯವನ್ನು ಸ್ಥಾಪಿಸಲು ಸ್ಥಳಾವಕಾಶವನ್ನು ಮಾಡಿಕೊಡುವಂತೆ ಶಾಸಕರನ್ನು ಮನವಿ ಮಾಡಿದರು.

ಕಾರ್ಯಕ್ರಮದ ಮುನ್ನ ಹನೂರು ತಹೀಸಿಲ್ದಾರ್ ನಾಗರಾಜು ದ್ವಜಾರೋಹಣ ನೇರವೇರಿಸಿದರು.

ವಿಜೃಂಭಣೆಯ ಮೆರವಣಿಗೆ: ಮಲೈಮಹದೇಶ್ವರ ಬೆಟ್ಟದಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ  ಶಾಸಕ ಆರ್.ನರೇಂದ್ರ ಮಾದಪ್ಪನ  ದೇವಾಲಯದ ಮುಂಭಾಗದಿಂದ ಕನ್ನಡ ರಥದ ಮೆರವಣಿಗೆಗೆ ಚಾಲನೆ ನೀಡಿದರು,ಈ ವೇಳೆ  ಸಮ್ಮೇಳನಾಧ್ಯಕ್ಷರಾದ ಪ್ರೋ ಕೇಶವನ್‍ಪ್ರಸಾದ್ ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಟ್ಯಾಕ್ಟರ್‍ನಲ್ಲಿ ಇಟ್ಟು ಸಮ್ಮೇಳಾಧ್ಯಕ್ಷರನ್ನು ಕರೆತರುವ ವೇಳೆಯಲ್ಲಿ ಸ್ಥಳೀಯ ಜಾನಪದ ವಿವಿಧ ಕಲಾ ತಂಡಗಳಾದ ವೀರಗಾಸೆ ಕುಣಿತ, ಗೊರವನ ಕುಣಿತ,  ಕಂಸಾಳೆ ಕುಣಿತ, ಮಾರಿಕುಣಿತವನ್ನು ಹಾಕುವ ಮೂಲಕ  ನೆರೆದಿದ್ದ ಕನ್ನಡಾಭಿಮಾನಿಗಳನ್ನು ಮನ ರಂಜಿಸಿದರು. ಹಾಗೂ ಇದೇ ವೇಳೆ ಶಿಕ್ಷಣಾಧಿಕಾರಿ ಹೆಜ್ಜೆ ಹಾಕುವ ಮೂಲಕ ಶಿಕ್ಷಕರು ಕೊಡ ಸಾಥ್ ನೀಡಿ  ಕುಣಿದು ಕುಪ್ಪಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷ ರುಕ್ಮಿಣಿ,ತಾಪಂ ಸದಸ್ಯ ಹಲಗತಂಬಡಿ ಉಪಾದ್ಯಕ್ಷ ಮಹೇಶ್, ಹನೂರು ಕಸಾಪ ಅದ್ಯಕ್ಷ ಶ್ರೀನಿವಾಸ್‍ನಾಯ್ಡು, ಮಾಜಿ ಜಿಪಂ ಸದಸ್ಯ ಬಸವರಾಜು, ಬಿಇಒ ಟಿ.ಆರ್.ಸ್ವಾಮಿ ಮ.ಮ ಬೆಟ್ಟದ ವೃತ್ತ ನಿರೀಕ್ಷಕರಾದ ಮಹೇಶ್, ಪಿಡಿಒ ರಾಜೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಜಾನ್‍ಬ್ರೀಟೋ. ಶಿಕ್ಷಕ ಗುರುಸ್ವಾಮಿ,ಚಿನ್ನರಾಜು ಉಪಾದ್ಯಕ್ಷ, ಮಲ್ಲಣ್ಣ, ಕಾರ್ಯದರ್ಶಿ ರವೀಂದ್ರ,ಮಲ್ಲೇಶ್ ಈರೇಂದ್ರ ಸೇರಿದಂತೆ ಇನ್ನತರರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News