ಫೋಟೋ ಶೂಟ್ ವೇಳೆ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಮೃತ್ಯು

Update: 2019-02-21 17:18 GMT

ಮೈಸೂರು,ಫೆ.21: ಫೋಟೋ ಶೂಟ್ ವೇಳೆ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ನಗುನಳ್ಳಿ ರೈಲು ನಿಲ್ದಾಣದಲ್ಲಿ ನಡೆದಿದೆ.

ಮೃತರನ್ನು ಮೈಸೂರಿನ ಪ್ರೀತಂ (15) ಎಂದು ಗುರುತಿಸಲಾಗಿದೆ. ನಿಂತಿದ್ದ ರೈಲಿನ ಮೇಲೆ ಫೋಟೋ ಶೂಟ್ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ.  ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News