ಗಡಿಯಂಚಿನ ಗ್ರಾಮಗಳ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡಿಸಬೇಕು: ಪ್ರೊ.ಕೇಶವನ್‍ ಪ್ರಸಾದ್

Update: 2019-02-21 17:32 GMT

ಹನೂರು: ಗಡಿಯಂಚಿನ ಗ್ರಾಮಗಳ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತಗೂಳಿಸದೇ ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುವಿಕೆಗೆ ಮುಂದಾಗಬೇಕು ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ.ಕೇಶವನ್‍ ಪ್ರಸಾದ್ ತಿಳಿಸಿದರು. 

ಹನೂರು ತಾಲ್ಲೂಕಿನ ಮಲೈಮಹದೇಶ್ವರ ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪದ ನಡು ಮಲೈಮಹದೇಶ್ವರ ವೇದಿಕೆಯಲ್ಲಿ ಹನೂರು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ದೇಶಿಸಿ ನಂತರ ಮಾತನಾಡಿದ ಅವರು ಹನೂರು ತಾಲೂಕು ರಾಜ್ಯದ ಗಡಿ ಭಾಗದಲ್ಲಿದ್ದು.  ಅತೀ ಹೆಚ್ಚು ಗ್ರಾಮಗಳು ಕಾಡಂಚಿನ ಪ್ರದೇಶಗಳಲ್ಲಿದೆ. ಈ ಗ್ರಾಮಗಳಲ್ಲಿ ವಾಸಿಸುವ ತಂದೆ ತಾಯಿಯಂದಿರು ತಮ್ಮ ಮಗುವಿಗೆ ಬಾಲ್ಯದಿಂದಲೇ ಗುಣಮಟ್ಟದ ಶಿಕ್ಷಣ ಕೂಡಿಸುವುದರ ಮೂಲಕ ಆ ಮಕ್ಕಳ ಭವಿಷ್ಯವನ್ನು ಉಜ್ವಲಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.  

ರಾಜ್ಯದ ಗಡಿ ಭಾಗದಲ್ಲಿರುವ ಹೋಗನಕಲ್ ಜಲಾಶಯ   ಕನ್ನಡಿಗರ ಉಸಿರಾಗಿದ್ದು. ಇದ್ದನ್ನು ಸರ್ಕಾರವು ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ  ಅಬಿವೃದ್ದಿಗೆ ಮುಂದಾದರೆ ಇಲ್ಲಿರುವ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಗಡಿ ಸಮಸ್ಯೆ ಬಗೆಹರಿಯುತ್ತದೆ ಎಂದರು.

ನಂತರ ಶಾಸಕ ಆರ್ ನರೇಂದ್ರ ಮಾತನಾಡಿ ಕಾವೇರಿ ನೀರು ವ್ಯರ್ಥವಾಗಿ ಹರಿದು ಸಮುದ್ರಕ್ಕೆ ಹೋಗುವುದನ್ನು ತೆಡೆದು ತಮ್ಮ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ಹಲವು ಕ್ರಮಕೈಗೂಂಡಿದ್ದು, ಈಗಾಗಲೇ ಮೇಕೆದಾಟು ಯೋಜನೆ ಮಾಡಲು ಕಾರ್ಯಕ್ರವನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಕಳುಹಿಸಿದ್ದು, ಇದಕ್ಕೆ ಮಂಜುರಾತಿಯೂ ದೂರಕಿದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಈ ಕೆಲಸ ಆಗುತ್ತದೆ ಎಂದು ಭರವಸೆಯ ನುಡಿಗಳನ್ನಾಡಿದರು.  ಹನೂರು ಪಟ್ಟಣದಲ್ಲಿ ಗುರುಭವನ ಮತ್ತು ಕನ್ನಡಭವನ ನಿರ್ಮಿಸಲು ಸೂಕ್ತವಾದ ಕಡೆ ನಿವೇಶನ ಗುರುತಿಸಿ ಕಾಮಗಾರಿ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷ ರುಕ್ಮಿಣಿ, ತಾ.ಪಂ. ಸದಸ್ಯ ಹಲಗತಂಬಡಿ ಉಪಾದ್ಯಕ್ಷ ಮಹೇಶ್, ಜಿಲ್ಲಾ ಕಸಾಪ ಅದ್ಯಕ್ಷ ವಿನಯ್, ಹನೂರು ಕಸಾಪ ಅದ್ಯಕ್ಷ ಶ್ರೀನಿವಾಸ್‍ನಾಯ್ಡು, ಮಾಜಿ ಜಿಪಂ ಸದಸ್ಯ ಬಸವರಾಜು, ಬಿಇಒ ಟಿ.ಆರ್.ಸ್ವಾಮಿ ಮ.ಮ ಬೆಟ್ಟದ ವೃತ್ತ ನಿರೀಕ್ಷಕರಾದ ಮಹೇಶ್, ಪಿಡಿಒ ರಾಜೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಜಾನ್‍ಬ್ರೀಟೋ. ಶಿಕ್ಷಕ ಗುರುಸ್ವಾಮಿ,ಚಿನ್ನರಾಜು ಉಪಾದ್ಯಕ್ಷ, ಮಲ್ಲಣ್ಣ, ಕಾರ್ಯದರ್ಶಿ ರವೀಂದ್ರ, ಮಲ್ಲೇಶ್ ಈರೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News