ದುಬೈ ಕನ್ನಡ ಸಂಘಗಳ ಮಹಾಪೋಷಕ ಝಫರುಲ್ಲಾ ಖಾನ್‍ಗೆ ಗೌರವ ಡಾಕ್ಟರೇಟ್

Update: 2019-02-23 18:16 GMT

ಮಂಡ್ಯ, ಫೆ.23: ದುಬೈ ಕನ್ನಡ ಸಂಘಗಳ ಮಹಾಪೋಷಕ ಝಫರುಲ್ಲಾ ಖಾನ್ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಇಂಟರ್ ನ್ಯಾಷನಲ್ ಪೀಸ್ ಯೂನಿವರ್ಸಿಟಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

ಮಂಡ್ಯದ ಬಡ ಮುಸ್ಲಿಂ ದಂಪತಿಗೆ ಜನಿಸಿದ ಝಫರುಲ್ಲಾ ಖಾನ್, ಮುಂಬೈ, ದುಬೈನಲ್ಲಿ ಉದ್ಯೋಗ ಪ್ರಾರಂಭಿಸಿದರು. ಇಂದು ದೊಡ್ಡ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಉದ್ಯಮ ಬೆಳೆಯುತ್ತಿದ್ದಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಖಾನ್ ದುಬೈನಲ್ಲಿ ಕನ್ನಡ ಸಂಘಗಳ ಮಹಾಪೋಷಕರಾಗಿ ಕನ್ನಡ ಕಟ್ಟುವಂತಹ ಕೆಲಸ ಮಾಡಿದ್ದಾರೆ.

ಇದಲ್ಲದೆ ಕರ್ನಾಟಕದಲ್ಲಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಕ್ರೀಡೆ, ಸಾಹಿತ್ಯ ಹೀಗೆ ಹಲವು ಕ್ಷೇತ್ರಕ್ಕೆ ಸಹಾಯ ಚಾಚಿರುವ ಝಫರುಲ್ಲಾ ಖಾನ್, ಕಳೆದ 37 ವರ್ಷದಿಂದ ಸಮಾಜ ಸೇವೆ ಮಾಡುತ್ತ ಬಂದಿದ್ದಾರೆ.

ಇವೆಲ್ಲವನ್ನು ಪರಿಗಣಿಸಿ ತಮಿಳುನಾಡಿನ ಹೊಸೂರಿನಲ್ಲಿ ಇಂಟರ್ ನ್ಯಾಷನಲ್ ಪೀಸ್‍ ಯೂನಿವರ್ಸಿಟಿ ವತಿಯಿಂದ ಜರ್ಮನಿಯ ಇಪಿಯು ಕೋರ್ಸ್ ಡೈರೆಕ್ಟರ್ "ಡೇನಿಯ ನೋರ ಬ್ರೆನಿಯರ್" ಝಫರುಲ್ಲಾ ಖಾನ್‍ರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News