ನೇಣು ಬಿಗಿದು ಯುವಕ ಆತ್ಮಹತ್ಯೆ
Update: 2019-02-25 23:29 IST
ಮಂಡ್ಯ, ಫೆ.25: ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚನ್ನಪ್ಪನದೊಡ್ಡಿ ಗ್ರಾಮದಲ್ಲ ನಡೆದಿದೆ.
ನಿಂಗೇಗೌಡ ಹಾಗೂ ಲಲಿತಾ ದಂಪತಿ ಏಕೈಕ ಪುತ್ರ ಸಿದ್ದೇಗೌಡ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಶನಿವಾರ ರಾತ್ರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ರವಿವಾರ ಸಂಜೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ರಾಮನಗರದ ಹಾಲು ಒಕ್ಕೂಟದಲ್ಲಿ ಕೆಲಸ ಮಾಡಿಕೊಂಡಿದ್ದ.
ಶನಿವಾರ ಮನೆಗೆ ಬಂದಿದ್ದ ಈತ ರವಿವಾರ ತಂದೆ ತಾಯಿಯನ್ನು ದೊಡ್ಡಅರಸಿನಕೆರೆಗೆ ಕಳುಹಿಸಿ, ತಾನು ಮತ್ತೆ ಬರುವುದಾಗಿ ಹೇಳಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.