ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ದೋಚಿದ ಖದೀಮರು

Update: 2019-02-26 16:31 GMT

ಮೈಸೂರು,ಫೆ.26: ಪೊಲೀಸರ ಸೋಗಿನಲ್ಲಿ ಬಂದು ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿದ ಘಟನೆ ನಗರದಲ್ಲಿ ಮೂರು ಕಡೆ ನಡೆದಿದೆ.

ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣ ನಡೆದಿದ್ದು, ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ನಡೆದಿದೆ. ಇಬ್ಬರು ಖದೀಮರು ಈ ಕೃತ್ಯವೆಸಗಿದ್ದಾರೆ. ಅರವಿಂದನಗರದಲ್ಲಿ ರಂಗಸ್ವಾಮಿ(62) ಎಂಬವರಿಂದ 12 ಗ್ರಾಂ ಚಿನ್ನಾಭರಣವನ್ನು ಖದೀಮರು ಲಪಟಾಯಿಸಿದ್ದು, ಜಯನಗರ 13 ನೇ ಕ್ರಾಸ್ ನಲ್ಲಿ ದತ್ತಾದ್ರಿ (70) ಎಂಬವರಿಂದ 20 ಗ್ರಾಂ ಚಿನ್ನಾಭರಣ ಲಪಟಾಯಿಸಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೋರ್ವರ 40 ಗ್ರಾಂ ಚಿನ್ನಾಭರಣವನ್ನು ಲಪಟಾಯಿಸಿದ್ದಾರೆ ಎನ್ನಲಾಗಿದೆ.

ಪೊಲೀಸರ ಸೋಗಿನಲ್ಲಿ ಬಂದು ಧರಿಸಿದ್ದ ಚಿನ್ನಾಭರಣ ತೆಗೆಸಿ ಕರ್ಚೀಫ್ ನಲ್ಲಿ ಹಾಕಿ ಕೊಟ್ಟಿದ್ದು, ಮನೆಗೆ ಬಂದು ನೋಡಿದಾಗ ಚಿನ್ನಾಭರಣ ಮಾಯವಾಗಿತ್ತು. ಖದೀಮರ ಕೈಚಳಕಕ್ಕೆ 72 ಗ್ರಾಂ ಚಿನ್ನವನ್ನು ವೃದ್ಧರು ಕಳೆದುಕೊಂಡಿದ್ದಾರೆ. ಇವರು ವೃದ್ಧರನ್ನೇ ಟಾರ್ಗೆಟ್ ಮಾಡಿದ್ದು, ಬೈಕ್ ನಲ್ಲಿ ಬಂದು ಕೃತ್ಯವೆಸಗಿ ಪರಾರಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News