ಮಾತುಕತೆಗೆ ಆಹ್ವಾನಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್

Update: 2019-02-27 13:17 GMT

ಇಸ್ಲಾಮಾಬಾದ್ : “ಭಾರತ ಮತ್ತು ಪಾಕಿಸ್ತಾನದ ನಡುವೆ ಈಗಿರುವ ಸಂಘರ್ಷಮಯ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದರೆ ಅದು ನನ್ನ ಅಥವಾ ಮೋದಿಯ ಕೈ ಮೀರಿ ಹೋಗುವುದು,'' ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಟಿವಿ ಸಂದೇಶವೊಂದರಲ್ಲಿ ಹೇಳಿದ್ದಾರೆ.

“ನಾನು ಭಾರತವನ್ನು ಕೇಳ ಬಯಸುತ್ತೇನೆ. ನಿಮ್ಮಲ್ಲಿರುವ ಹಾಗೂ ನಮ್ಮಲ್ಲಿರುವ  ಶಸ್ತ್ರಾಸ್ತ್ರಗಳನ್ನು  ಪರಿಗಣಿಸಿದಾಗ ತಪ್ಪು ಲೆಕ್ಕಾಚಾರ ಸಾಧ್ಯವೇ? ನಿಮ್ಮನ್ನು ಮಾತುಕತೆಗೆ ಆಹ್ವಾನಿಸುತ್ತೇವೆ. ಉತ್ತಮ ಯೋಚನೆಗಳು ಇರಲಿ,'' ಎಂದು ಇಮ್ರಾನ್ ಹೇಳಿದ್ದಾರೆ.

“ನಿಮಗೆ ನಮ್ಮ ದೇಶದೊಳಗೆ ನುಗ್ಗಲು ಸಾಧ್ಯವೆಂದಾದರೆ ನಮಗೂ ಅದನ್ನೇ ಮಾಡಲು ಸಾಧ್ಯವೆಂದು ತೋರಿಸುವುದೇ ನಮ್ಮ ಕೃತ್ಯದ ಉದ್ದೇಶ. ಅವರ ಎರಡು ಮಿಗ್ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಇಲ್ಲಿಂದ ನಾವು ಜಾಣತನದಿಂದ ಮುಂದುವರಿಯುವುದು ಅಗತ್ಯವಾಗಿದೆ,'' ಎಂದು ಇಮ್ರಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News