ಬಿಎಸ್‌ವೈ ಬಂಧನಕ್ಕೆ ಆಗ್ರಹಿಸಿ ಆರೆಸ್ಸೆಸ್ ಮಾಜಿ ಸಂಚಾಲಕ ಹನುಮೇಗೌಡ ದೂರು

Update: 2019-02-28 14:47 GMT

ಬೆಂಗಳೂರು, ಫೆ. 28: ರಾಷ್ಟ್ರದ ಭದ್ರತೆ-ದೇಶದ ಸೈನಿಕದ ತ್ಯಾಗ-ಬಲಿದಾನವನ್ನು ಕೀಳುಮಟ್ಟದ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ, ಸರಕಾರದ ಮುಖ್ಯಕಾರ್ಯದರ್ಶಿ, ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಆರೆಸ್ಸೆಸ್ ಮಾಜಿ ಸಂಚಾಲಕ ಹನುಮೇಗೌಡ ದೂರು ನೀಡಿದ್ದಾರೆ.

‘ಪಾಕ್ ಮೇಲಿನ ವಾಯುಸೇನೆ ದಾಳಿಯಿಂದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲಲಿದೆ’ ಎಂಬ ಹೇಳಿಕೆಯನ್ನು ಬಿಎಸ್‌ವೈ ನೀಡಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಸಂಚಕಾರ ತರಲಿದೆ. ಅಡ್ಡದಾರಿಯ ಮೂಲಕ ಅಧಿಕಾರಕ್ಕಾಗಿ ದೇಶದ ಸೈನಿಕರ ತ್ಯಾಗ-ಬಲಿದಾನವನ್ನು ದುರ್ಬಳಕೆ ಮಾಡಿಕೊಳ್ಳುವುದು ಸಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಿ ಸೈನಿಕರ ಶೌರ್ಯ, ತ್ಯಾಗ-ಬಲಿಗಾನವನ್ನು ದುರ್ಬಳಕೆ ಮಾಡಿಕೊಂಡ ಬಿ.ಎಸ್.ಯಡಿಯೂರಪ್ಪನವರನ್ನು ರಾಷ್ಟ್ರೀಯ ಭದ್ರತೆ ಕಾನೂನಿನ ಅಡಿಯಲ್ಲಿ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹನುಮೇಗೌಡ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News