ಲೋಕಸಭಾ ಚುನಾವಣೆ ಹಿನ್ನೆಲೆ: 61 ತಹಶೀಲ್ದಾರ್‌ಗಳ ವರ್ಗಾವಣೆ

Update: 2019-02-28 15:41 GMT

ಬೆಂಗಳೂರು, ಫೆ.28: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ 61 ಮಂದಿ ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬೆಂಗಳೂರಿನ ಬಿಎಂಆರ್‌ಸಿಎಲ್ ತಹಶೀಲ್ದಾರ್ ಗ್ರೇಡ್ 2-ಜಿ.ಮಂಜುನಾಥ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರ್- ಎನ್.ನರಸಿಂಹಮೂರ್ತಿ, ಬೆಂಗಳೂರು ವಕ್ಫ್ ಬೋರ್ಡ್ ತಹಶೀಲ್ದಾರ್- ಎಲ್.ಗಾಯತ್ರಿ, ಕೋಲಾರ ತಹಶೀಲ್ದಾರ್ ಗ್ರೇಡ್ 1-ಶ್ರೀನಿವಾಸ ಪ್ರಸಾದ್.

ಮಾಲೂರು ತಹಶೀಲ್ದಾರ್ ಗ್ರೇಡ್ 1-ಎಂ.ನಾಗರಾಜು, ಬಿಡಿಎ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯ ತಹಶೀಲ್ದಾರ್-ಭಾರತಿ, ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯ ಪುರಸಭೆ ತಹಶೀಲ್ದಾರ್-ಬಿ.ನಾಗವೇಣಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ್-ಎ.ತಿಪ್ಪೇಸ್ವಾಮಿ.

ಚಾಮರಾಜನಗರ ಚುನಾವಣಾ ತಹಶೀಲ್ದಾರ್-ಎಲ್.ಎಂ.ನಂದೀಶ್, ಕೊರಟಗೆರೆ ತಹಶೀಲ್ದಾರ್ ಗ್ರೇಡ್ 1-ಬಿ.ವಿ.ಗಿರೀಶ್ ಬಾಬು, ಚಿತ್ರದುರ್ಗ ತಹಶೀಲ್ದಾರ್ ಗ್ರೇಡ್ 1-ನಹೀದಾ ಝಂಝಂ, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಹಶೀಲ್ದಾರ್ ಗ್ರೇಡ್ 1-ವೈ.ತಿಪ್ಪೇಸ್ವಾಮಿ.

ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯ ಕಚೇರಿ ಸಹಾಯಕ- ಬಿ.ಎನ್.ವರದರಾಜು, ಪಾವಗಡ ತಹಶೀಲ್ದಾರ್ ಗ್ರೇಡ್ 1-ಪಿ.ಎಸ್.ಕಂಬಾರ, ಮಧುಗಿರಿ ತಾಲೂಕು ತಹಶೀಲ್ದಾರ್ ಗ್ರೇಡ್ 1-ರಮೇಶ್ ಬಾಬು, ಸರಗೂರು ತಾಲೂಕು ತಹಶೀಲ್ದಾರ್ ಗ್ರೇಡ್ 1-ಜೆ.ಮಹೇಶ್, ಸಾಗರ ತಹಶೀಲ್ದಾರ್ ಗ್ರೇಡ್ 1-ನಾಗರಾಜು.

ಎನ್.ಆರ್.ಪುರ ತಹಶೀಲ್ದಾರ್ ಗ್ರೇಡ್ 1-ಚಂದ್ರಶೇಖರ ನಾಯ್ಕ, ಸಂಡೂರು ತಹಶೀಲ್ದಾರ್ ಗ್ರೇಡ್ 1-ಎಚ್.ಜಿ.ರಶ್ಮಿ, ಎಚ್.ಡಿ.ಕೋಟೆ ತಹಶೀಲ್ದಾರ್ ಗ್ರೇಡ್ 1-ಪಿ.ಎಸ್.ಮಹೇಶ್, ಬೈಂದೂರು ತಹಶೀಲ್ದಾರ್ ಗ್ರೇಡ್ 1-ಬಸಪ್ಪ ಪ್ರಜಾರಿ, ಬೆಳಗಾವಿ ಪುರಸಭಾ ತಹಶೀಲ್ದಾರ್-ಲಲಿತಾ ಎಂ.ಮದ್ನಾಳ್, ಬೆಳಗಾವಿ ಚುನಾವಣಾ ತಹಶೀಲ್ದಾರ್-ಎಂ.ಎಂ.ಜಮಖಂಡಿ.

ಗುಳೇದಗುಡ್ಡ ತಹಶೀಲ್ದಾರ್ ಗ್ರೇಡ್ 1-ಎಂ.ಎ.ಎಸ್.ಭಗವಾನ್, ಧಾರವಾಡ ಎನ್‌ಎಚ್ 63 ಭೂ ಸ್ವಾಧೀನಾಧಿಕಾರಿಗಳ ಕಚೇರಿಯ ತಹಶೀಲ್ದಾರ್- ಆರ್.ಕೆ.ಕುಲಕರ್ಣಿ, ಬಾಗಲಕೋಟೆ ತಹಶೀಲ್ದಾರ್ ಗ್ರೇಡ್ 2-ಮುಹಮ್ಮದ್ ಮುಲ್ಕಿಸಿಪಾಯಿ, ವಿಜಯಪುರ ನಿಡಗುಂದಿ ತಾಲೂಕು ತಹಶೀಲ್ದಾರ್ ಗ್ರೇಡ್ 1-ಎಂ.ಆರ್.ಭಜಂತ್ರಿ.

ಸಿಂಧನೂರು ತಹಶೀಲ್ದಾರ್ ಗ್ರೇಡ್ 1-ವಿ.ಎಸ್.ಕಡಕಭಾವಿ, ಸಿಂಧಗಿ ತಹಶೀಲ್ದಾರ್ ಗ್ರೇಡ್ 1-ಚೆನ್ನಮಲ್ಲಪ್ಪ ಗಂಟಿ, ಹೊನ್ನಾವರ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ-ವಸಂತ್ ಆರ್.ಗೌಡ, ಹೊನ್ನಾವರ ತಹಶೀಲ್ದಾರ್ ಗ್ರೇಡ್ 1-ಮಂಜುಳಾ ಭಜಂತ್ರಿ, ಬಳ್ಳಾರಿ ಚುನಾವಣಾ ತಹಶೀಲ್ದಾರ್-ಆನಂದ ಶೀಲಾ, ಕಲಬುರಗಿ ಚುನಾವಣಾ ತಹಶೀಲ್ದಾರ್-ಸುರೇಶ್ ಚವಲ್ಕರ್, ಇಂಡಿ ತಹಶೀಲ್ದಾರ್ ಗ್ರೇಡ್ 1-ಉಮಾಕಾಂತ್ ಹಳ್ಳೆ.

ರಾಯಚೂರು ಪುರಸಭಾ ತಹಶೀಲ್ದಾರ್-ಶೃತಿ, ಬೆಂಗಳೂರು ಡಿಎಸ್‌ಎಸ್‌ಪಿ ತಹಶೀಲ್ದಾರ್-ಆರ್.ಭಾಗ್ಯ, ಬೆಂಗಳೂರು ಬಿಬಿಎಂಪಿ ದಕ್ಷಿಣ ಚುನಾವಣಾ ತಹಶೀಲ್ದಾರ್-ಸಿಬ್ಗತುಲ್ಲಾ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ-ಎನ್.ಕೃಷ್ಣಪ್ಪ, ಚಿಂತಾಮಣಿ ತಹಶೀಲ್ದಾರ್ ಗ್ರೇಡ್ 1-ಮಹೇಂದ್ರ, ಹುಬ್ಬಳ್ಳಿಯ ಎಚ್‌ಡಿಎಂಸಿ ಎಸ್ಟೇಟ್ ಅಧಿಕಾರಿ-ಶಿವಾನಂದ ಪ್ರಭಾಕರ ರಾಣೆ.

ಬೆಂಗಳೂರು ಲೋಕಾಯುಕ್ತ ತಹಶೀಲ್ದಾರ್-ಮಹೇಂದ್ರ, ಮಂಗಳೂರು ಯುಪಿಓಆರ್ ತಹಶೀಲ್ದಾರ್-ಎಚ್.ಕೆ.ತಿಪ್ಪೇಸ್ವಾಮಿ, ಕುಂದಾಪುರ ತಹಶೀಲ್ದಾರ್ ಗ್ರೇಡ್ 1-ವಿ.ಎನ್.ಬಾಡಕರ್, ದಾವಣಗೆರೆ ಡಿಟಿಐ ಉಪ ಪ್ರಾಂಶುಪಾಲ- ದಿವಾಕರ ರೆಡ್ಡಿ, ಚಿಕ್ಕಮಗಳೂರು ಚುನಾವಣಾ ತಹಶೀಲ್ದಾರ್-ಎಂ.ಎಸ್.ಶೈಲಜಾ, ಲಿಂಗಸಗೂರು ತಹಶೀಲ್ದಾರ್ ಗ್ರೇಡ್ 1-ಎಲ್.ಡಿ.ಚಂದ್ರಕಾಂತ.

ತುಮಕೂರು ರಾಷ್ಟ್ರೀಯ ಹೆದ್ದಾರಿ 206 ಭೂ ಸ್ವಾಧೀನಾಧಿಕಾರಿಗಳ ಕಚೇರಿ ತಹಶೀಲ್ದಾರ್-ಕೃಷ್ಣಮೂರ್ತಿ, ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿ ಸಹಾಯಕ(ಆಡಳಿತ)-ತನುಜಾ ಟಿ.ಸವದತ್ತಿ, ಧಾರವಾಡ ಡಿಟಿಐ ಜಿಲ್ಲಾ ತರಬೇತಿ ಕೇಂದ್ರದ ಪತ್ರಾಂಕಿತ ಬೋಧಕ-ಬಸವರಾಜ್ ಮೆಳವಂಕಿ, ನ್ಯಾಮತಿ ತಹಶೀಲ್ದಾರ್ ಗ್ರೇಡ್ 1-ರೇಣುಕಮ್ಮ.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ- ಎಚ್.ಕೊಟ್ರೇಶ್, ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯ ಮುನ್ಸಿಪಲ್ ತಹಶೀಲ್ದಾರ್-ರಮೇಶ್ ಅಳವಂಡಿಕರ, ದೇವನಹಳ್ಳಿ ತಾಲೂಕು ತಹಶೀಲ್ದಾರ್ ಗ್ರೇಡ್ 2-ಅನಿಲ್‌ಕುಮಾರ್ ಅರೋಲಿಕರ್, ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ತಹಶೀಲ್ದಾರ್ ಗ್ರೇಡ್ 1-ಜಗನ್ನಾಥ ಪೂಜಾರಿ.

ಕೊಪ್ಪಳ ಚುನಾವಣಾ ತಹಶೀಲ್ದಾರ್-ಎಂ.ಬಸವರಾಜು, ಮಾಗಡಿ ತಹಶೀಲ್ದಾರ್ ಗ್ರೇಡ್ 1-ಟಿ.ಎನ್.ನರಸಿಂಹಮೂರ್ತಿ, ಬೆಂಗಳೂರು ದಕ್ಷಿಣ ತಾಲೂಕು ಬಿಬಿಎಂಪಿ ಚುನಾವಣಾ ತಹಶೀಲ್ದಾರ್-ಎನ್.ರಮೇಶ್, ಬೆಂಗಳೂರು ಫ್ಲೈಯಿಂಗ್ ಸ್ಕೂಲ್ ತಹಶೀಲ್ದಾರ್ ಗ್ರೇಡ್ 1-ಪದ್ಮ ಶ್ರೀ, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತಹಶೀಲ್ದಾರ್ ಗ್ರೇಡ್ 1-ಪ್ರಕಾಶ ಹೊಳೆಪ್ಪಗೋಳ, ಹಾವೇರಿ ತಹಶೀಲ್ದಾರ್ ಗ್ರೇಡ್ 1-ರಾಘವೇಂದ್ರರಾವ್, ರಬಕವಿ ಬನಹಟ್ಟಿ ತಹಶೀಲ್ದಾರ್ ಗ್ರೇಡ್ 1-ಶಿವಕುಮಾರ್‌ರನ್ನು ವರ್ಗಾವಣೆ ಮಾಡಲಾಗಿದೆ.

ಸ್ಥಳ ನಿಯುಕ್ತಿಗೊಳಿಸಲಾಗಿರುವ ಮೇಲ್ಕಂಡ ಅಧಿಕಾರಿಗಳನ್ನು ಆಯಾ ಜಿಲ್ಲಾಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರು ಕೂಡಲೇ ಬಿಡುಗಡೆಗೊಳಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News