ಬೆಟ್ಟತ್ತೂರು : ಗಾಂಜಾ ಗಿಡ ಬೆಳೆದ ಆರೋಪಿಯ ಬಂಧನ
Update: 2019-03-01 21:28 IST
ಮಡಿಕೇರಿ,ಮಾ.1: ಗಾಂಜಾ ಗಿಡಗಳನ್ನು ಬೆಳೆದಿರುವ ಪ್ರಕರಣವನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟ್ಟತ್ತೂರು ಗ್ರಾಮದ ಧರ್ಮಪ್ಪ ಎಂಬವರನ್ನು ಬಂಧಿಸಿದ್ದಾರೆ.
ಬೆಟ್ಟತ್ತೂರು ಗ್ರಾಮದ ಧರ್ಮಪ್ಪ ಅವರು ತಮ್ಮ ತೋಟದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸಿರುವುದಾಗಿ ದೊರೆತ ಖಚಿತ ಮಾಹಿತಿಯ ಮೇರೆಗೆ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷ ಸಿದ್ದಯ್ಯ, ಉಪ ನಿರೀಕ್ಷಕ ವಿ.ಚೇತನ್, ಎಎಸ್‍ಐ ಶ್ರೀಧರ್ ಹಾಗೂ ಸಿಬ್ಬಂದಿಗಳಾದ ಇಬ್ರಾಹಿಂ, ತೀರ್ಥಕುಮಾರ್, ಹನೀಫ್, ರಾಜೇಶ್, ಕನ್ನಿಕಾ ಹಾಗೂ ಚಾಲಕ ಅರುಣ್ ಅವರು ಶುಕ್ರವಾರ ದಾಳಿ ನಡೆಸಿದರು.
ಆರೋಪಿಯು ತನ್ನ ತೋಟದಲ್ಲಿ ಬೆಳೆದಿದ್ದ ಮೂರು ಗಾಂಜಾ ಗಿಡಗಳನ್ನು (ಸುಮಾರು 5.5ಕೆ.ಜಿ) ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ಧರ್ಮಪ್ಪ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.