×
Ad

ಕೆಎಸ್‍ಆರ್‍ಟಿಸಿ ಬಸ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು

Update: 2019-03-02 23:56 IST

ಹನೂರು,ಮಾ.2: ಕೆಎಸ್‍ಆರ್‍ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಹನೂರು ಸಮೀಪದ ವಡಕೆಹಳ್ಳ ಗ್ರಾಮದ ಬಳಿ ಶನಿವಾರ ಸಂಜೆ ನಡೆದಿದೆ.

ದ್ವಿಚಕ್ರ ವಾಹನ ಟಿವಿಎಸ್ ಮೊಪೆಡ್ ಸವಾರ ವಡಕೆಹಳ್ಳದ ನಿವಾಸಿ ಮಾದೇಶ್(46) ಮೃತ ವ್ಯಕ್ತಿ.

ಮಾದೇಶ್ ತನ್ನ ವಾಹನದಲ್ಲಿ ಕೌದಳ್ಳಿ ಕಡೆ ತೆರಳುತ್ತಿದ್ದಾಗ ಗ್ರಾಮದ ಸೇತುವೆಯ ಸಮೀಪದಲ್ಲಿ ಮಲೈಮಹದೇಶ್ವರ ಬೆಟ್ಟದ ಕಡೆಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ನಡುವೆ ಈ ಅವಘಡ ಸಂಭವಿಸಿದೆ. ಪರಿಣಾಮ ಸ್ಥಳದಲ್ಲಿಯೇ ಮಾದೇಶ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮಲೈಮಹದೇಶ್ವರಬೆಟ್ಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News