ಮದುವೆ ಮನೆಯಲ್ಲಿ ಹಾಡಿಗಾಗಿ ಜಗಳ: ಗುಂಡೇಟು ತಗುಲಿ ಮಹಿಳೆ ಮೃತ್ಯು

Update: 2019-03-03 08:44 GMT

ಹೊಸದಿಲ್ಲಿ, ಮಾ.3: ಸಂಬಂಧಿಕರ ಮದುವೆ ಸಮಾರಂಭದಲ್ಲಿ ಹಾಡಿನ ವಿಷಯಕ್ಕೆ ಸಂಬಂಧಿಸಿದ ಜಗಳದ ವೇಳೆ ಗುಂಡೇಟಿನಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ದಿಲ್ಲಿಯ ಮಂಗೋಲ್ಪುರಿಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ಪೊಲೀಸರು ಚಂಡೀಗಢದಿಂದ ಇಬ್ಬರನ್ನು ಬಂಧಿಸಿದ್ದಾರೆ.

ಹಾಡಿಗೆ ಸಂಬಂಧಿಸಿದಂತೆ ಮಹಿಳೆಯ ಪತಿ ಮತ್ತು ಇಬ್ಬರು ಯುವಕರ ನಡುವೆ ಜಗಳ ನಡೆದಿತ್ತು. ಈ ಸಂದರ್ಭ ಓರ್ವ ಯುವಕ ಪಿಸ್ತೂಲ್ ಹೊರತೆಗೆದು ಗುಂಡಿಕ್ಕಿದ್ದಾನೆ. ಈ ಸಂದರ್ಭ ಮಹಿಳೆ ಅಡ್ಡಬಂದಿದ್ದು, ಅವರಿಗೆ ಗುಂಡು ತಗಲಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News