×
Ad

ಹುತಾತ್ಮ ಯೋಧನ ಕುಟುಂಬಕ್ಕೆ ಜಮೀನು ದಾನ ಪತ್ರ ಹಸ್ತಾಂತರಿಸಿದ ನಟಿ ಸುಮಲತಾ

Update: 2019-03-04 21:41 IST

ಮಂಡ್ಯ, ಮಾ.4: ಭರವಸೆ ನೀಡಿದಂತೆ ದಿವಂಗತ ಅಂಬರೀಷ್ ಪತ್ನಿ ಸುಮಲತಾ ಮದ್ದೂರು ತಾಲೂಕಿನ ಗುಡಿಗೆರೆ ಕಾಲನಿಯ ಹುತಾತ್ಮ ಯೋಧ ಎಚ್.ಗುರು ಕುಟುಂಬಕ್ಕೆ ಜಮೀನು ದಾನಪತ್ರ ಹಸ್ತಾಂತರ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಗುರು ಪತ್ನಿ ಕಲಾವತಿ, ತಾಯಿ ಚಿಕ್ಕತಾಯಮ್ಮ ಹಾಗು ತಂದೆ ಹೊನ್ನಯ್ಯ ಅವರಿಗೆ ಗುಡಿಗೆರೆ ಕಾಲನಿ ಸಮೀಪದ ತಮ್ಮ 20 ಗುಂಟೆ ಜಮೀನಿನ ದಾನ ಪತ್ರವನ್ನು ಹಸ್ತಾಂತರಿಸಿದರು.

ಯೋಧನ ಕುಟುಂಬದ ಅಂತ್ಯಸಂಸ್ಕಾರದ ವೇಳೆ ಅಂತ್ಯಕ್ರಿಯೆಗೆ ಜಾಗವಿಲ್ಲದ ಸುದ್ದಿ ತಿಳಿದಿದ್ದೆ. ಅಂದೇ ಆ ಕುಟುಂಬಕ್ಕೆ ಜಮೀನು ಕೊಡುವುದಾಗಿ ಹೇಳಿದ್ದೆ. ನಮ್ಮ ಕುಟುಂಬದವರು ಕೂಡ ಸೈನ್ಯದಲ್ಲಿದ್ದವರು. ಆದ್ದರಿಂದ ನನಗೆ ಇದು ತುಂಬಾ ಹತ್ತಿರದ ವಿಷಯವಾಗಿತ್ತು. ಹಾಗಾಗಿ ನಾನು ಈ ಕುಟುಂಬಕ್ಕೆ ಸಹಾಯ ಮಾಡುವ ಮನಸ್ಸು ಮಾಡಿದ್ದೆ. ಯಾವುದೇ ಷರತ್ತು ಇಲ್ಲದೆ ನಾವು ಅವರ ಕುಟುಂಬಕ್ಕೆ ಜಮೀನು ಹಸ್ತಾಂತರ ಮಾಡಿದ್ದೇನೆ ಎಂದು ಸುಮಲತಾ ಹೇಳಿದರು.

ಸುಮಲತಾ ಅವರಿಗೆ ಕೃತಜ್ಞತೆ ಸಲ್ಲಿಸಿದ ಗುರು ಪತ್ನಿ ಕಲಾವತಿ, ನಾನು ಅವರ ನಂಬಿಕೆ ಉಳಿಸಿಕೊಳ್ಳುತ್ತೇನೆ. ದಾನ ಕೊಟ್ಟ ಜಮೀನನ್ನು ಯಾವ ಕಾರಣಕ್ಕೂ ಮಾರಾಟ ಮಾಡುವುದಿಲ್ಲ. ಜನರ ನಂಬಿಕೆಗೆ ವಿರುದ್ಧವಾಗಿ ನಡೆಯುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News