ವ್ಯಕ್ತಿಯ ಕೊಲೆ ಪ್ರಕರಣ: ನಾಲ್ವರ ಬಂಧನ
Update: 2019-03-04 21:42 IST
ಮೈಸೂರು,ಮಾ.4: ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಮೈಸೂರಿನ ಹೊರವಲಯದಲ್ಲಿ ಬಿಸಾಕಿದ್ದ ನಾಲ್ವರು ಆರೋಪಿಗಳನ್ನು ಜಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಹದೇವಪುರದ ಆದರ್ಶ್, ತೇಜ ಹಾಗೂ ಜೆ.ಪಿ.ನಗರದ ಮಹದೇವ, ಪುಟ್ಟರಾಜು ಎಂದು ಗುರುತಿಸಲಾಗಿದೆ. ಈ ನಾಲ್ವರು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಬಲ್ಲಹಳ್ಳಿಯ ಶ್ರೀಕಂಠು ಎಂಬವನನ್ನು ಇತ್ತೀಚೆಗೆ ಜಯಪುರ ಬಳಿಯ ಅರಸಿಕೆರೆ ಗ್ರಾಮದ ಬಳಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ತೆಗದುಕೊಂಡ ಜಯಪುರ ಠಾಣಾ ಪೊಲೀಸರು ತನಿಖೆ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.