×
Ad

ಮಂಡ್ಯದಲ್ಲಿ ನನ್ನ ಸೇವೆ ಶುರುವಾಗಿದೆ: ನಿಖಿಲ್‍ ಕುಮಾರಸ್ವಾಮಿ

Update: 2019-03-04 21:51 IST

ಮಂಡ್ಯ, ಮಾ.4: ಮಂಡ್ಯದಲ್ಲಿ ಇಂದಿನಿಂದ ನನ್ನ ಸೇವೆ ಆರಂಭವಾಗಲಿದೆ. ನಮ್ಮ ಪಕ್ಷದ ವರಿಷ್ಠರು ಲೋಕಸಭೆ ಚುನಾವಣೆಗೆ ನನ್ನ ಹೆಸರು ಘೋಷಿಸಿದ್ದಕ್ಕೆ ಅಭಾರಿಯಾಗಿದ್ದೇನೆ. ಜಿಲ್ಲೆಯ ಜನರ ಭಾವನೆಗಳಿಗೆ ಅನುಗುಣವಾಗಿ ನನ್ನ ಹೆಸರು ಘೋಷಣೆ ಮಾಡಿದ್ದಾರೆ. ಹೀಗಾಗಿ ಇಂದಿನಿಂದ ಮಂಡ್ಯದಲ್ಲಿ ನನ್ನ ಸೇವೆ ಶುರುವಾಗಿದೆ ಎಂದು ನಿಖಿಲ್‍ ಕುಮಾರಸ್ವಾಮಿ ಹೇಳಿದ್ದಾರೆ.

ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದ್ಯದಲ್ಲೇ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಮಂಡ್ಯದಲ್ಲೇ ಮನೆ ಮತ್ತು ಕಚೇರಿಯನ್ನೂ ತೆರೆಯುತ್ತೇನೆ, ಕಾದು ನೋಡಿ ಎನ್ನುವ ಮೂಲಕ ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಖಚಿತಪಡಿಸಿದರು.

ಸುಮಲತಾ ಅಕ್ಕ ಸ್ಪರ್ಧೆ ಬಗ್ಗೆ ನಾನು ಏನೂ ಹೇಳಲ್ಲ. ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅವರು ಸ್ವತಂತ್ರರು. ಅಂಬರೀಶಣ್ಣನ ಬಗ್ಗೆ ನನಗೆ ಗೌರವವಿದೆ. ಅಭಿ ನನ್ನ ತಮ್ಮ ಇದ್ದ ಹಾಗೆ. ಅಂಬಿ ಅಂಕಲ್ ತಂದೆ ಸಮಾನರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News