ತಿಪ್ಪಗೊಂಡನಹಳ್ಳಿ ಜಲಾಶಯ ಕಾಮಗಾರಿಗೆ ಮಾ.6 ರಂದು ಎಚ್‌ಡಿಕೆ ಶಂಕುಸ್ಥಾಪನೆ

Update: 2019-03-05 17:09 GMT

ಬೆಂಗಳೂರು, ಮಾ.5: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಉತ್ತರಹಳ್ಳಿಯಲ್ಲಿ 24 ದ.ಲ.ಲೀ ಸಾಮರ್ಥ್ಯದ ನೆಲಮಟ್ಟದ ಜಲಾಗಾರದ ಲೋಕಾರ್ಪಣೆ, ಗೊಟ್ಟಿಗೆರೆಯಲ್ಲಿ 50 ದ.ಲ.ಲೀ ಸಾಮರ್ಥ್ಯದ ಜಲಾಗಾರ ಶಂಕುಸ್ಥಾಪನೆ ಹಾಗೂ 110 ಹಳ್ಳಿಗೆ ಕಾವೇರಿ ನೀರು ಕುಡಿಯುವ ಯೋಜನೆಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಾ.6ರ ಬೆಳಗ್ಗೆ 11.30ಕ್ಕೆ ಗೊಟ್ಟಿಗೆರೆ ಗುಡ್ಡ, ಕೊಟ್ಟಿಗೆರೆಯಲ್ಲಿ ಚಾಲನೆ ನೀಡಲಿದ್ದಾರೆ.

ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಮೊದಲನೆ ಹಂತದಲ್ಲಿ ಪುನಃಶ್ಚೇತನಗೊಳಿಸುವ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಾ.6ರ ಬುಧವಾರ ಸಂಜೆ 4ಗಂಟೆಗೆ ತಿಪ್ಪಗೊಂಡನಹಳ್ಳಿ ಜಲಾಶಯದ ಆವರಣ, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ನೆರವೇರಿಸಲಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ನಿರ್ಮಲಾ ಸೀತಾರಾಮನ್, ರಾಜ್ಯ ಸಚಿವರಾದ ಕೆ.ಜೆ.ಜಾರ್ಜ್ ಮತ್ತಿತರರು ಹಾಜರಿರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News