ಮೋದಿ ನೇತೃತ್ವದಷ್ಟು ಶಕ್ತಿಯುತವಾದ ಸರ್ಕಾರ ಮತ್ತೊಂದಿಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Update: 2019-03-06 17:20 GMT

ಮೈಸೂರು,ಮಾ.6: ಸ್ವಾತಂತ್ರ್ಯ ಬಂದಾಗಿನಿಂದ ಇಷ್ಟೊಂದು ಶಕ್ತಿಯುತವಾಗಿ ಕೆಲಸ ಮಾಡಿರುವ ಸರ್ಕಾರ ಮತ್ತೊಂದಿಲ್ಲ ಎಂದು ಕೇಂದ್ರದ ಪ್ರಧಾನಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡರು.

ಖಾಸಗಿ ಹೋಟೆಲ್‍ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ವೇಗವನ್ನು ನಾವು ಹಿಂಬಾಲಿಸುತ್ತಿದ್ದೇವೆ. ಇತಿಹಾಸದಲ್ಲಿ ಬೇರೆ ಯಾವುದೇ ಸರ್ಕಾರವೂ ಇಷ್ಟೊಂದು ಶಕ್ತಿಯುತವಾಗಿ ಕೆಲಸ ಮಾಡಿಲ್ಲ. 1947 ರಿಂದ ಇಷ್ಟು ಶ್ರಮವಹಿಸಿ ಕೆಲಸ ಮಾಡಿದ ಉದಾಹರಣೆ ಇಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಇದೆ. ಇತಿಹಾಸದಲ್ಲಿ ಬೇರೆ ಯಾವುದೇ ಸರ್ಕಾರವೂ ಮಾಡದ ಕೆಲಸವನ್ನ ಶಕ್ತಿಯುತವಾಗಿ ನಮ್ಮ ಸರ್ಕಾರ ಮಾಡಿದೆ. ರೈತರು ಸೇರಿದಂತೆ ಎಲ್ಲಾ ವರ್ಗದವರನ್ನು ನಾವು ತಲುಪಿದ್ದೇವೆ. ಯುಪಿಎ ಸಮಯದಲ್ಲಿ ಬೆಲೆ ಏರಿಕೆಯಾಗಿತ್ತು. ಬೇಳೆ 200 ಕೆಜಿ ತರಕಾರಿ 80 ರಿಂದ 150. ಎಲ್ಲದರ ಕೊರತೆ ಉಂಟಾಗಿತ್ತು. ಸಾರ್ವಜನಿಕ ವಲಯದ ಅನೇಕ ಉದ್ಯಮಗಳು ಬಂದ್ ಆಗಿದ್ದವು. ಜನರು ಅಸಹಾಯಕರಾಗಿದ್ದರು. ಈ ದೇಶದ ಬದಲಾಯಿಸಲಾಗುವುದಿಲ್ಲ ಅನ್ನೋ ಹಂತ ತಲುಪಿದ್ದರು. ಯಾವ ರೀತಿ ಸುಧಾರಣೆಯಾಗುತ್ತೆ ಅನ್ನುವ ಪರಿಸ್ಥಿತಿ ಇತ್ತು. ಕೇಳುವ ಕೆಲಸ ಮಾಡುವ ಸರ್ಕಾರ ಬೇಕಾಗಿತ್ತು. ಅದನ್ನು ಮೋದಿ ಸರ್ಕಾರ ಮಾಡಿದೆ ಎಂದು ಹೇಳಿದರು.

ಭ್ರಷ್ಟಾಚಾರದ ಒಂದೂ ಆರೋಪ ಕೇಳಿ ಬಂದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ರಫೇಲ್ ಬಗ್ಗೆ ಅರ್ಥವೇ ಆಗಿಲ್ಲ. ರಾಷ್ಟ್ರೀಯ ಹಿತಾಸಕ್ತಿಗೆ ಕೆಲಸ ಮಾಡೋದು ಅವರಿಗೆ ಗೊತ್ತಿಲ್ಲ. ಡಿಫೆನ್ಸ್ ಕಾರ್ಯವೈಖರಿ ಗೊತ್ತಿಲ್ಲ. ಎಲ್ಲವನ್ನೂ ಒಂದು ಪೈಸೆ ಕಿಕ್ ಬ್ಯಾಕ್ ನೀಡದೆ ಖರಿದೀಸಿದ್ದೇವೆ ಎಂದು ಹೇಳಿದರು.

ಶತ್ರುಗಳು ನಮ್ಮ ನಿರ್ಧಾರವನ್ನು ಇಷ್ಟಪಟ್ಟಿಲ್ಲ. ಅದಕ್ಕಾಗಿ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ. ಇಂತಹದನ್ನು ನಂಬಿದರೆ ಮತ್ತಷ್ಟು ಅಟ್ಯಾಕ್‍ಗಳು ಆಗುತ್ತವೆ. ಆತ್ಮಹತ್ಯಾ ದಾಳಿಗಳಾಗುತ್ತವೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ನಾವು ಭಯೋತ್ಪಾದಕ ಕ್ಯಾಂಪ್ ಮೇಲೆ ಮಾಡಿದ ದಾಳಿ ಗುಪ್ತಚರ ವರದಿ ಆಧಾರಿತ ದಾಳಿ. ನಾವು ಹೋಗಿ ಮಾಡಿದ್ದಲ್ಲ, ಸೇನೆ ಮಾಡಿದ್ದು. ಹಿಂದಿನಿಂದಲೂ ದೇಶದಲ್ಲಿ ಆದ ದಾಳಿ ಬಗ್ಗೆ ಪಾಕಿಸ್ಥಾನಕ್ಕೆ ನಿರಂತರವಾಗಿ ಸಾಕ್ಷ್ಯ ನೀಡುತ್ತಿದ್ದೇವೆ. ಅವರೂ ಏನು ಮಾಡುತ್ತಿಲ್ಲ. ಪುಲ್ವಾಮ ದಾಳಿ ಆದ 10 ದಿನದ ನಂತರವೂ ಪಾಕಿಸ್ಥಾನ ಏನು ಮಾಡಲಿಲ್ಲ. ಅದಕ್ಕಾಗಿ ಭಯೋತ್ಪಾದಕರ ಕ್ಯಾಂಪ್ ಮೇಲೆ ದಾಳಿ ಮಾಡಿದ್ದೇವೆ. ಹಿಂದೆ ಏನೂ ಮಾಡದವರು ಈಗ ಸಾಕ್ಷಿ ಕೇಳುತ್ತಿದ್ದಾರೆ. 26/11 ಅಟ್ಯಾಕ್ ಆದಾಗ ಏನು ಮಾಡದವರು ಸಾಕ್ಷಿ ಕೇಳುತ್ತಿದ್ದಾರೆ ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News