ಕರ್ನಾಟಕ ದೇವೆಗೌಡರ ಅಪ್ಪನ ಮನೆ ಆಸ್ತಿನಾ ?: ಶಾಸಕ ಪ್ರೀತಂಗೌಡ ಪ್ರಶ್ನೆ

Update: 2019-03-06 17:32 GMT

ಮೈಸೂರು,ಮಾ.6: ಕರ್ನಾಟಕ ದೇವೇಗೌಡರ ಅಪ್ಪನ ಮನೆ ಆಸ್ತಿನಾ? ಒಕ್ಕಗಲಿಗರೇನು ಇವರ ಮನೆ ಬಾಂಡೆಡ್ ಲೇಬರ್ಸ್ ಅಲ್ಲ ಎಂದು ಹಾಸನ ನಗರ ಶಾಸಕ ಪ್ರೀತಂ ಗೌಡ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಜೆ.ಕೆ.ಮೈದಾನದಲ್ಲಿ ಬುಧವಾರ ಭಾರತೀಯ ಜನತಾ ಪಾರ್ಟಿ ವತಿಯಿಂದ ಶಕ್ತಿಕೇಂದ್ರದ ಪ್ರಮುಖರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮನಗರ ಗಂಡನಿಗೆ, ಚೆನ್ನಪಟ್ಟಣ ಹೆಂಡತಿಗೆ, ಮಂಡ್ಯ ಮಗನಿಗೆ. ಪಕ್ಕದ ಜಿಲ್ಲೆ ಹಾಸನ ಅಣ್ಣನ ಮಗನಿಗೆ, ಕರ್ನಾಟಕದ ಗೌಡರೇನು ದೇವೇಗೌಡರ ಕುಟುಂಬಕ್ಕೆ ಜಿಪಿಎ ಮಾಡಿಕೊಟ್ಟಿಲ್ಲ, ನಾವ್ಯಾರು ಬಾಂಡೆಡ್ ಲೇಬರ್ಸ್ ಅಲ್ಲ ಎಂದು ಹರಿಹಾಯ್ದರು.

ದೇವೇಗೌಡ ಕುಟುಂಬಕ್ಕೆ ಓಟ್ ಹಾಕಿದ್ರೆ ಅದು ಪ್ರೈವೇಟ್ ಪ್ರಾಪರ್ಟಿ ಇದ್ದಹಾಗೆ, ಬಿಜೆಪಿಗೆ ಓಟ್ ಹಾಕಿದ್ರೆ ಅದು ದೇಶದ ಅಭಿವೃದ್ದಿಗೆ. ಗೌಡರು ಎಂದರೆ ದೇವೇಗೌಡ ಕುಟುಂಬ ಮಾತ್ರ ಅಲ್ಲ, ಪ್ರತಾಪ್ ಸಿಂಹ, ಎಲ್.ನಾಗೇಂದ್ರ ಅವರು ಬೇರೆ ಕಡೆಯಿಂದ ಬಂದಿಲ್ಲ. ಅವರು ಇಲ್ಲಿಯ ಗೌಡರೆ ಎಂದು ದೇವೇಗೌಡರ ಕುಟುಂಬದ ವಿರುದ್ಧ ವಾಕ್ಸಮರ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News