ಸ್ವಚ್ಛ ಸರ್ವೇಕ್ಷಣದಲ್ಲಿ ಮೂರನೇ ಸ್ಥಾನ ಪಡೆದ ಮೈಸೂರು

Update: 2019-03-06 17:35 GMT

ಮೈಸೂರು,ಮಾ.6: ಸ್ವಚ್ಛ ಸರ್ವೇಕ್ಷಣಾ 2019ರಲ್ಲಿ ದೇಶದ ಟಾಪ್ 3 ನಗರಗಳಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮಹಾನಗರ ಪಾಲಿಕೆ ಕೂಡ ನಾಮ ನಿರ್ದೇಶನಗೊಂಡಿತ್ತು. ಇಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರು ಸ್ವಚ್ಛನಗರಿಯಲ್ಲಿ ಮೂರನೇ ಸ್ಥಾನ ಪಡೆದು ಪ್ರಶಸ್ತಿ ಗಳಿಸಿದೆ.

ಟಾಪ್ 3 ನಗರಗಳ ಕ್ರಮವಾಗಿ, ಇಂದೋರ್, ಅಂಬಿಕಾಪುರ್ ಮತ್ತು ಮೈಸೂರು ನಾಮನಿರ್ದೇಶನಗೊಂಡಿತ್ತು. ಇಂದು ದೆಹಲಿಯ ವಿಜ್ಞಾನ ಭವನದಲ್ಲಿ   ನಡೆದ ಕಾರ್ಯಕ್ರಮದಲ್ಲಿ ಇಂದೋರ್ ಮೊದಲ ಸ್ಥಾನ, ಅಂಬಿಕಾಪುರ್ ಎರಡನೇ ಸ್ಥಾನ ಮತ್ತು ಮೈಸೂರು ಮೂರನೆ ಸ್ಥಾನ ಪಡೆದಿದೆ ಎಂದು ರ‍್ಯಾಂಕಿಂಗ್ ಘೋಷಣೆ ಮಾಡಲಾಯಿತು. ಮೇಯರ್ ಪುಷ್ಪಲತಾ ಜಗನ್ನಾಥ್ ಮತ್ತು ಪಾಲಿಕೆ ಆಯುಕ್ತರಾದ ಶಿಲ್ಪನಾಗ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭ ವೈದ್ಯಾಧಿಕಾರಿ ನಾಗರಾಜ್ ಮತ್ತು ಉಪಮೇಯರ್ ಶಫಿ ಅಹ್ಮದ್ ಉಪಸ್ಥಿತರಿದ್ದರು.

ಆದರೆ ಮೈಸೂರಿಗೆ ಮೂರನೇ ಸ್ಥಾನ ಸಿಕ್ಕಿದ್ದು ಮೈಸೂರಿಗರಿಗೆ ತೀವ್ರ ನಿರಾಶೆಯಾಗಿದೆ. ಈ ಬಾರಿಯಾದರೂ ಮತ್ತೆ ಮೊದಲನೇ ಸ್ಥಾನವನ್ನು ಪಡೆಯಬಹುದೆಂದು ಮೈಸೂರಿಗರು ನಿರೀಕ್ಷಿಸಿದ್ದರು. ಸ್ವಚ್ಛತೆಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋದಲ್ಲಿ ಮೈಸೂರು ಸ್ವಚ್ಛನಗರಿ ಪಟ್ಟವನ್ನು ಪಡೆಯಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News