ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ

Update: 2019-03-06 18:05 GMT

ಬೆಂಗಳೂರು, ಮಾ. 6: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಫೆ.16ರಂದು ನಡೆದ ರಾಜ್ಯ ಪರಿಷತ್ ಮಹಾಸಭೆ ನಿರ್ಣಯದಂತೆ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಮತ್ತು ಖಜಾಂಚಿ ಸ್ಥಾನಕ್ಕೆ 2019ರ ಎಪ್ರಿಲ್ 23ರಿಂದ ಮೇ 21ರ ವರೆಗೆ ಚುನಾವಣೆಗಳು ನಡೆಯಲಿವೆ ಎಂದು ಅಧಿಸೂಚನೆ ಹೊರಡಿಸಲಾಗಿದೆ.

ಜಿಲ್ಲಾ, ತಾಲೂಕು ಶಾಖೆ ಹಾಗೂ ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿಗೆ ಮಾ.16ರಿಂದ 26ರ ವರೆಗೆ. ತಾಲೂಕು ಶಾಖೆ, ಯೋಜನಾ ಘಟಕಗಳ ಅಧ್ಯಕ್ಷರು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಸ್ಥಾನಕ್ಕೆ ಮಾ.28ರಿಂದ ಎಪ್ರಿಲ್ 8ರ ವರೆಗೆ. ಜಿಲ್ಲಾ ಶಾಖೆ ಅಧ್ಯಕ್ಷರು, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಸ್ಥಾನಕ್ಕೆ ಎಪ್ರಿಲ್ 9ರಿಂದ 22ರ ವರೆಗೆ ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಇಲಾಖಾವಾರು ಮಾ.21ರಿಂದ ಎಪ್ರಿಲ್ 16ರ ವರೆಗೆ ಚುನಾವಣೆ ನಡೆಯಲಿದೆ.

2019ರಿಂದ 2023ರ ಸಾಲಿನ ಅವಧಿಗೆ ಮೇಲ್ಕಂಡ ಚುನಾವಣೆ ನಡೆಯಲಿದೆ. ರಾಜ್ಯ ಸರಕಾರಿ ನೌಕರರ ಸಂಘದ ಬೈಲಾನಿಯಮಗಳನ್ವಯ ಸದಸ್ಯತ್ವ ನವೀಕರಿಸಿರುವ ಎಲ್ಲ ಸರಕಾರಿ ನೌಕರರು ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ಅರ್ಹರಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News