ಕದ್ದ ದಾಖಲೆಗಳನ್ನು ಮಾಧ್ಯಮ ಬಳಸಿದೆ ಎಂಬ ಸರಕಾರದ ಹೇಳಿಕೆಯನ್ನು ಖಂಡಿಸಿದ ‘ಎಡಿಟರ್ಸ್ ಗಿಲ್ಡ್’

Update: 2019-03-07 10:04 GMT

ಹೊಸದಿಲ್ಲಿ, ಮಾ.7: ರಫೇಲ್ ಒಪ್ಪಂದದ ಕುರಿತಂತೆ ಕೆಲ ಮಾಧ್ಯಮಗಳು ಪ್ರಕಟಿಸಿರುವ ವರದಿಗೆ ಆಧಾರವಾಗಿ ಉಪಯೋಗಿಸಲಾಗಿರುವ ದಾಖಲೆಗಳನ್ನು `ರಕ್ಷಣಾ ಸಚಿವಾಲಯದಿಂದ ಕದಿಯಲಾಗಿದೆ' ಎಂಬ ಸರಕಾರದ ವಾದವನ್ನು ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಖಂಡಿಸಿದೆ.

ಈ ದಾಖಲೆಗಳನ್ನು ಬಳಸಿದ ಪತ್ರಕರ್ತರು ಅಥವಾ ವಕೀಲರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಬೆದರಿಕೆ ಹಾಕಿರುವುದನ್ನು ಕಂಡು ಕಳವಳವಾಗಿದೆ ಎಂದು ಗಿಲ್ಡ್ ಹೇಳಿದೆ. ಅಧಿಕೃತ ರಹಸ್ಯಗಳ ಕಾಯ್ದೆಯನ್ನು ಮಾಧ್ಯಮದ ವಿರುದ್ಧ ಪ್ರಯೋಗಿಸುವ ಯಾವುದೇ ಯತ್ನವು ಪತ್ರಕರ್ತರಿಗೆ ತಮ್ಮ ಮೂಲಗಳನ್ನು ಬಹಿರಂಗಪಡಿಸಲು ಹೇಳುವಷ್ಟೇ ಖಂಡನೀಯ'' ಎಂದು ‘ಎಡಿಟರ್ಸ್ ಗಿಲ್ಡ್’ ಅಭಿಪ್ರಾಯ ಪಟ್ಟಿದೆ.

ಅಟಾರ್ನಿ ಜನರಲ್ ನಂತರ ತಮ್ಮ ಹೇಳಿಕೆಯಲ್ಲಿ ಈ ದಾಖಲೆಗಳನ್ನು ಬಳಸಿದ ಪತ್ರಕರ್ತರು ಯಾ ವಕೀಲರ ವಿರುದ್ಧ ತನಿಖೆ ಹಾಗೂ ಕ್ರಮ ಕೈಗೊಳ್ಳ್ಳುವ ಸಂಭಾವ್ಯತೆಯಿಲ್ಲವೆಂದು ಹೇಳಿದ್ದರೂ ಇಂತಹ ಬೆದರಿಕೆಗಳಿಂದ ತನಗೆ ಗಾಬರಿಯಾಗಿದೆ. ಇಂತಹ ಹೇಳಿಕೆಗಳಿಂದ ಮುಖ್ಯವಾಗಿ ರಫೇಲ್ ಬಗ್ಗೆ ವರದಿ ಮಾಡುವ ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತಾಗುತ್ತದೆ'' ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News