×
Ad

ಹಾಡಹಗಲೇ ಚೂರಿ ಇರಿದು ಆಟೋ ಚಾಲಕನ ಹತ್ಯೆ

Update: 2019-03-07 19:58 IST

ತುಮಕೂರು,ಮಾ.7: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನನ್ನು ಹಾಡಹಗಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಬನಶಂಕರಿ ಬಡಾವಣೆ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಆಟೋ ಚಾಲಕ ಅಸ್ಗರ್ (30) ಕೊಲೆಯಾದ ವ್ಯಕ್ತಿ. ಇರ್ಫಾನ್ ಮತ್ತು ಫಯಾಜ್ ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಎದುರಿಗೆ ಆಟೋದಲ್ಲಿ ಬಂದ ಅಸ್ಗರ್ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಇರ್ಫಾನ್ ಮತ್ತು ಫಯಾಜ್ ಚಾಕುವಿನಿಂದ ಅಸ್ಗರ್ ಗೆ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಅಸ್ಗರ್ ಸ್ಥಳದಲ್ಲಿ ಕುಸಿದು ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಇರ್ಫಾನ್ ಮತ್ತು ಫಯಾಜ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News