ಶಾಸ್ತ್ರೀಯ ನೃತ್ಯ-ಭರತ ನಾಟ್ಯ: ಮಂಡ್ಯದ ಸಹೋದರಿಯರು ಗಿನ್ನಿಸ್ ರೆಕಾರ್ಡ್ ಗೆ ದಾಖಲು
Update: 2019-03-10 23:44 IST
ಮಂಡ್ಯ, ಮಾ.10: ಕಳೆದ ಮಾ.4 ರಂದು ತಮಿಳುನಾಡಿನ ಚಿದಂಬರಂನ ತಿಲೈ ನಾಟ್ಯಂಜಲಿ ಟ್ರಸ್ಟ್ ವತಿಯಿಂದ ಗಿನ್ನಿಸ್ ವರ್ಲ್ಡ್ ರೆಕಾರ್ಡ್‍ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಹಳೇ ಬೂದನೂರು ಗ್ರಾಮದ ಇಬ್ಬರು ಸಹೋದರಿಯರು ಪಾಲ್ಗೊಂಡು ಪ್ರದರ್ಶನ ನೀಡಿ ಗಿನ್ನಿಸ್ ರೆಕಾರ್ಡ್‍ಗೆ ದಾಖಲಾಗಿ ಪ್ರಶಸ್ತಿ ಪತ್ರ ಪಡೆದಿದ್ದಾರೆ.
ಸುಮಾರು 10 ಸಾವಿರ ಸ್ಪರ್ಧಿಗಳು ನಟೆಸಾರ್ ಕಥುವಂ ಕುರಿತಂತೆ ಭಾರತೀಯ ಶಾಸ್ತ್ರೀಯ ನೃತ್ಯ-ಭರತ ನಾಟ್ಯವನ್ನು ಏಕಕಾಲಕ್ಕೆ 18 ನಿಮಿಷಗಳ ಕಾಲ ಪ್ರದರ್ಶನ ನೀಡಿದ್ದಾರೆ.
ಬೆಂಗಳೂರಿನ ಶ್ರೀ ಮಾರಿಕಾಂಭ ನೃತ್ಯ ಕಲಾಕೇಂದ್ರದ ವಿದುಷಿ ಸ್ಮಿತಾ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಹಳೇ ಬೂದನೂರು ಗ್ರಾಮದ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಕೆ.ಶೇಖರ್ ಹಾಗೂ ಬಿ.ಆರ್.ಶ್ವೇತಾ ಅವರ ಪುತ್ರಿಯರಾದ ದೀಪ್ತಿ ಶೇಖರ್ ಮತ್ತು ಧೃತಿಶೇಖರ್ ಅವರ ಸಾಧನೆಗೆ ಗ್ರಾಮಸ್ಥರು ಹಾಗೂ ಸಂಬಂಧಿಗಳಾದ ಬಿ.ಆರ್.ಅನ್ನಪೂರ್ಣರಾಜೇಂದ್ರ ಹಾಗೂ ಶೃತಿ ಬಿ.ಆರ್.ಚೇತನ್, ಕು.ನಕ್ಷತ್ರಾ ಅಭಿನಂದನೆ ಸಲ್ಲಿಸಿದ್ದಾರೆ.