×
Ad

ವಕೀಲೆಯ ಕೊಲೆ ಪ್ರಕರಣ: ಆರೋಪಿ ಬಂಧನ

Update: 2019-03-10 23:47 IST

ಮಂಡ್ಯ, ಮಾ.10: ಮಳವಳ್ಳಿ ತಾಲೂಕಿನ ತಳಗವಾದಿ ಸಮೀಪದ ಕಬ್ಬಿನ ಗದ್ದೆಯಲ್ಲಿ ಮಾ.6 ರಂದು ಪತ್ತೆಯಾಗಿದ್ದ ಮಾದಹಳ್ಳಿ ಗ್ರಾಮದ ವಕೀಲೆ ಮಾದಲಾಂಬಿಕ ಕೊಲೆ ಪ್ರಕರಣವನ್ನು ಮಳವಳ್ಳಿ ಗ್ರಾಮಾಂತರ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಪಂಡಿತಹಳ್ಳಿ ಗ್ರಾಮದ ಮಹದೇವಸ್ವಾಮಿ ವಕೀಲೆಯನ್ನು ಕೊಲೆಮಾಡಿದ ಆರೋಪಿಯಾಗಿದ್ದು, ಹಣಕಾಸಿನ ವಿಚಾರವಾಗಿ ಮಾದಲಾಂಬಿಕೆ ಕೊಲೆ ನಡೆದಿದೆ ಎನ್ನಲಾಗಿದೆ.

ಫೆ.26 ರಂದು ನ್ಯಾಯಾಲಯದ ಕರ್ತವ್ಯ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುವಾಗ ಮಹದೇವಸ್ವಾಮಿಯನ್ನು ಡ್ರಾಪ್ ಕೊಡುವಂತೆ ಕೇಳಿದ್ದಾರೆ. ಅದರಂತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಹಣದ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದು ವಿಕೋಪಕ್ಕೆ ತಿರುಗಿ ತಳಗವಾದಿ ಗ್ರಾಮದ ಸಮೀಪ ಆರೋಪಿ ಮಹದೇವಸ್ವಾಮಿ ತಲೆಗೆ ಒಡೆದ ಪರಿಣಾಮ ವಕೀಲೆ ಮಾದಲಾಂಬಿಕೆ ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಸಂದರ್ಭದಲ್ಲಿ ಮೃತದೇಹವನ್ನು ರಸ್ತೆ ಪಕ್ಕದಲ್ಲೇ ಇದ್ದ ಕಬ್ಬಿನ ಗದ್ದೆಗೆ ಎಳೆದು ಹಾಕಿ ಪರಾರಿಯಾಗಿರುವುದಾಗಿ ಆರೋಪಿ ಪೊಲೀಸರಿಗೆ ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಆರೋಪಿ ಮಹದೇವಸ್ವಾಮಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News