ಲೋಕಸಭೆ ಚುನಾವಣೆ ಹಿನ್ನೆಲೆ: ಸಿಇಟಿ ಪರೀಕ್ಷೆ ಮುಂದೂಡಿಕೆ
Update: 2019-03-11 19:40 IST
ಬೆಂಗಳೂರು, ಮಾ. 11: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಪ್ರಿಲ್ 23 ಮತ್ತು 24 ರಂದು ನಿಗದಿಯಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮುಂದೂಡಲಾಗಿದೆ.
ಲೋಕಸಭೆ ಚುನಾವಣೆಯು ಎ.18 ಹಾಗೂ ಎ.23ರಂದು ಎರಡು ಹಂತದಲ್ಲಿ ನಡೆಯಲಿದೆ. ಹೀಗಾಗಿ ಸಿಇಟಿ ಪರೀಕ್ಷೆಯನ್ನು ಮುಂದೂಡಿದ್ದು, ಇದೀಗ ಎಪ್ರಿಲ್ 29 ಮತ್ತು 30ರಂದು ಸಿಇಟಿ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.
ಎ.29ರ ಸೋಮವಾರ ಬೆಳಗ್ಗೆ 10:30ರಿಂದ 11:50ರ ವರೆಗೆ ಜೀವಶಾಸ್ತ್ರ(60 ಅಂಕ) ಅದೇ ದಿನ ಮಧ್ಯಾಹ್ನ 2:30ರಿಂದ 3:50ರ ವರೆಗೆ ಗಣಿತ(60 ಅಂಕ) ಎ.30ರ ಬೆಳಗ್ಗೆ 10:30ರಿಂದ 11:50ರ ವರೆಗೆ ಭೌತಶಾಸ್ತ್ರ(60 ಅಂಕ) ಹಾಗೂ ಮಧ್ಯಾಹ್ನ 2:30ರಿಂದ 3:50ರ ವರೆಗೆ ರಸಾಯನಶಾಸ್ತ್ರ(60 ಅಂಕ). ಕನ್ನಡ ಭಾಷಾ ಪರೀಕ್ಷೆಯನ್ನು ಮೇ 1ರಂದು ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.