ತುಮಕೂರಿನಲ್ಲಿ ಸ್ಪರ್ಧಿಸಲು ದೇವೇಗೌಡರಿಗೆ ಯಾವ ನೈತಿಕತೆ ಇದೆ?: ಶಾಸಕ ಮಾಧುಸ್ವಾಮಿ

Update: 2019-03-11 16:05 GMT

ತುಮಕೂರು,ಮಾ,11: ಮೊಮ್ಮಗನಿಗಾಗಿ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರದ ಹುಡುಕಾಟದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ತುಮಕೂರು ಜಿಲ್ಲೆಯನ್ನು ಬರದ ಜಿಲ್ಲೆಯನ್ನಾಗಿಸಿ ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವುದು ನಾಚಿಕೆಗೇಡಿನ ವಿಷಯ ಎಂದು ಶಾಸಕ ಮಾಧುಸ್ವಾಮಿ ಲೇವಡಿ ಮಾಡಿದ್ದಾರೆ.

ಬಿಜೆಪಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ತುಮಕೂರು ಜಿಲ್ಲೆಗೆ ಹೇಮಾವತಿ ನೀರನ್ನು ಹರಿಯಲು ಬಿಡದೇ, ಹೇಮಾವತಿ ನೀರಿಗಾಗಿ ಮಾಡಿದ ಹೋರಾಟವನ್ನು ವಿರೋಧಿಸುತ್ತಾ ಬಂದಂತಹ ದೇವೇಗೌಡರವರು ಯಾವ ನೈತಿಕತೆಯಿಂದ ಇಂದು ತುಮಕೂರು ಲೋಕಸಭಾ ಅಭ್ಯರ್ಥಿ ಆಗಲು ಅಣಿಯಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರು ಜಿಲ್ಲೆಯವರನ್ನು ಮಲತಾಯಿ ಮಕ್ಕಳಂತೆ ಕಂಡು ಹೇಮಾವತಿ ನಾಲೆಯನ್ನೇ ಒಡೆದು ಹಾಕಿ ನಮಗೆ ಕುಡಿಯಲು ನೀರನ್ನು ಸಹ ನೀಡದ ಈ ಧೀಮಂತ ನಾಯಕನಿಗೆ ಯಾವ ಕಾರಣಕ್ಕೆ ಮತಹಾಕ ಬೇಕು ನೀವೇ ಹೇಳಿ, ಯಾರೇ ಬಂದರೂ ಈ ಬಾರಿ ಬಿಜೆಪಿಗೆ ಮತಹಾಕಲು ಜಿಲ್ಲೆಯ ಜನತೆ ಸಿದ್ದರಾಗಿದ್ದಾರೆ, ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ರಾಜಕಾರಣಿಗಳಿಗಿಂತ ಮತದಾರರೇ ಪ್ರಬುದ್ದ ರಾಗಿದ್ದಾರೆ ಎಂದು ಮಾಧುಸ್ವಾಮಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News