×
Ad

ಹೊಸ ವಾಹನ ಖರೀದಿದಾರರಿಗೆ ರಸ್ತೆ ಸುರಕ್ಷತಾ ಸುಂಕದ ಹೊರೆ ?

Update: 2019-03-11 22:52 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.11: ರಸ್ತೆ ಸುರಕ್ಷತಾ ತೆರಿಗೆ ಸಂಗ್ರಹಿಸಲು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ್ದು, ಹೊಸ ವಾಹನ ಖರೀದಿಸುವವರು ಮುಂದಿನ ದಿನಗಳಲ್ಲಿ ಹೆಚ್ಚಿನ ತೆರಿಗೆ ಪಾವತಿಸಬೇಕಾಗಿದೆ.

ಈ ಸಂಬಂಧ ಹೊಸ ಅಧಿಸೂಚನೆ ಹೊರಡಿಸಿದ್ದು, ಅದರ ಪ್ರಕಾರ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಖರೀದಿಸುವವರಿಂದ ರಸ್ತೆ ಸುರಕ್ಷತೆ ಸುಂಕವಾಗಿ 500ರೂ.ಗಳು ಹಾಗೂ ಬೇರೆ ವಾಹನಗಳಿಗೆ 1 ಸಾವಿರ ರೂ.ಗಳಷ್ಟು ತೆರಿಗೆ ವಿಧಿಸಲಾಗುತ್ತದೆ.

ತೆರಿಗೆಯಿಂದ ಸಂಗ್ರಹವಾದ ಹಣವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರದ ಆಡಳಿತಾತ್ಮಕ ವೆಚ್ಚಕ್ಕಾಗಿ ಬಳಸಲಾಗುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆ 2017ರ ಪ್ರಕಾರ, ರಸ್ತೆ ಸುರಕ್ಷತೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ರಸ್ತೆ ಸುರಕ್ಷತೆ ಪ್ರಾಧಿಕಾರ ಮತ್ತು ರಸ್ತೆ ಸುರಕ್ಷತೆ ನಿಧಿ ವಸಾಹತುಗಳನ್ನು ರಚಿಸಲು ಈ ಕಾಯ್ದೆಯನ್ನು ಬಳಸಲಾಗುತ್ತದೆ.

ರಾಜ್ಯದಲ್ಲಿ ಪ್ರತಿನಿತ್ಯ ಅಂದಾಜು ಮೂರುವರೆ ಸಾವಿರ ಹೊಸ ವಾಹನಗಳು ರಸ್ತೆಗಿಳಿಯುತ್ತವೆ, ಅವುಗಳಲ್ಲಿ ಸುಮಾರು 2 ಸಾವಿರ ವಾಹನಗಳು ಬೆಂಗಳೂರಿನಲ್ಲೇ ಇವೆ. ಹೊಸದಾಗಿ ನಮೂದಾಗಿರುವ ವಾಹನಗಳಿಂದ ಸಂಗ್ರಹವಾಗುವ ತೆರಿಗೆ ಪ್ರತಿನಿತ್ಯ ಸುಮಾರು 15 ಲಕ್ಷವಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News