ಕೊಡಗಿನ ವಿವಿಧೆಡೆ ಉತ್ತಮ ಮಳೆ

Update: 2019-03-11 17:26 GMT

ಮಡಿಕೇರಿ, ಮಾ.11: ಬಿಸಿಲ ಬೇಗೆಯಿಂದ ಬಿಸಿಯಾಗಿದ್ದ ಕಾವೇರಿ ನಾಡು ಕೊಡಗು ಇಂದು ಸುರಿದ ಉತ್ತಮ ಮಳೆಗೆ ತಂಪಾಗಿದೆ. ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು, ಮದೆನಾಡು, ಬೆಟ್ಟಗೇರಿ ಸೇರಿದಂತೆ ಮಡಿಕೇರಿ ನಗರದಲ್ಲೂ ಉತ್ತಮ ಮಳೆಯಾಗಿದೆ. 

ಸೋಮವಾರ ಬೆಳಗ್ಗೆ 4.30 ರ ಸುಮಾರಿಗೆ ಮತ್ತು ಸಂಜೆ ಇದೇ ಸಮಯಯಕ್ಕೆ ಗುಡುಗು ಸಹಿತ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ಕಡಿಮೆ ಮಳೆಯಾಗಿದೆ. ವಾಡಿಕೆ ಮಳೆ ಬೀಳದ ಕಾರಣ ಕೆಲವು ಗ್ರಾಮಗಳ ಪ್ರಮುಖರು ಇತ್ತೀಚೆಗೆ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ದರು. ಇಂದು ಸುರಿದ ಉತ್ತಮ ಮಳೆ ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News