ಲೋಕಸಭಾ ಚುನಾವಣೆ: ಜ್ಯೋತಿಷಿಗಳಿಗೂ ತಟ್ಟಿದ ನೀತಿ ಸಂಹಿತೆ
Update: 2019-03-12 22:46 IST
ಬೆಂಗಳೂರು, ಮಾ.12: ಲೋಕಸಭಾ ಚುನಾವಣೆಯನ್ನು ಪಾರದಾರ್ಶಕವಾಗಿ ನಡೆಸಲು ಪಣತೊಟ್ಟಿರುವ ಚುನಾವಣಾ ಆಯೋಗ ಕಟ್ಟುನಿಟ್ಟನ ನೀತಿ ಸಂಹಿತೆ ಜಾರಿ ಮಾಡಿದ್ದು, ಜ್ಯೋತಿಷಿಗಳ ಅಂಗಡಿಗಳ ಮುಂದೆ ಹಸ್ತದ ಗುರುತು ಹೊಂದಿರುವ ಬೋರ್ಡ್‌ಗಳನ್ನು ಪೇಪರ್‌ನಿಂದ ಮುಚ್ಚಲಾಗುತ್ತಿದೆ.
ಮಂಡ್ಯ, ರಾಮನಗರ, ಬೆಂಗಳೂರಿನ ಕೆಲವು ಭಾಗಗಳಲ್ಲಿ ಜ್ಯೋತಿಷ್ಯದ ಅಂಗಡಿಗಳ ಮುಂದಿದ್ದ ಹಸ್ತದ ಗುರುತಿರುವ ಬೋರ್ಡ್‌ಗಳನ್ನು ಮುಚ್ಚಲಾಗಿದೆ. ಸಾರ್ವಜನಿಕ ವಲಯದಲ್ಲಿ ಪ್ರಭಾವಿಯೆಂದು ಗುರುತಿಸಿಕೊಂಡಿರುವ ಸಂಘ, ಸಂಸ್ಥೆಗಳು ಒಂದು ಪಕ್ಷದ ಪರವಾಗಿ ಮತ ಹಾಕುವಂತೆ ಆಮಿಷ ಒಡ್ಡುವಂತಿಲ್ಲ.
ಕೇವಲ ಚಿಹ್ನೆಗಳ ಮೇಲೆ ಮಾತ್ರವಲ್ಲದೇ ದೇವಸ್ಥಾನಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅಭ್ಯರ್ಥಿಗಳ ಪರ ಧಾರ್ಮಿಕ ಚಿಹ್ನೆ, ಪಕ್ಷದ ಬಾವುಟ ಹಿಡಿದು ಪ್ರಚಾರ ಮಾಡುವಂತಿಲ್ಲ. ಫೇಸ್ ಬುಕ್, ಟ್ವಿಟರ್, ವಾಟ್ಸಾಪ್ ಸೇರಿದಂತೆ ಯಾವುದೆ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡುವಂತಿಲ್ಲವೆಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.